ಭಾರತದ ವಿರುದ್ಧ ಸೋತಿದ್ದಲ್ಲದೇ ದಂಡವನ್ನೂ ಕಟ್ಟಬೇಕಿದೆ ದ. ಆಫ್ರಿಕಾ

ಸೋಮವಾರ, 23 ಫೆಬ್ರವರಿ 2015 (11:16 IST)
ಭಾನುವಾರ ಭಾರತದ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಸೋತಿರುವ ದ.ಆಫ್ರಿಕಾ, ನಿಧಾನ ಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ದಂಡ ವಿಧಿಸಿದೆ.

ನಿಗದಿತ ಕಾಲಾವಧಿಯಲ್ಲಿ ಒಂದು ಓವರ್ ಕಡಿಮೆ ಮಾಡಿರುವುದು. ಪಂದ್ಯ ರೆಫರಿ ಜೆಫ್ ಕ್ರೋವ್ ಅವರಿಗೆ ಕಂಡುಬಂದಿದ್ದು, ನಾಯಕ ಎಬಿ ಡಿವಿಲಿಯರ್ಸ್‌‍ಗೆ ಶೇ 20ರಷ್ಟು ಪಂದ್ಯ ಶುಲ್ಕ ಮತ್ತು ತಂಡದ ಉಳಿದವರಿಗೆ ಶೇ. 10ರಷ್ಟು ಪಂದ್ಯ ಶುಲ್ಕದ ದಂಡವನ್ನು ವಿಧಿಸಲಾಗಿದೆ.

ಐಸಿಸಿ ನೀತಿ ಸಂಹಿತೆ ಪ್ರಕಾರ ಪ್ರತಿ ಒಂದು ಓವರ್ ಕೊರತೆಬಿದ್ದರೆ ಆಟಗಾರರಿಗೆ ಶೇ. 10 ಮತ್ತು ನಾಯಕನಿಗೆ ಅದರ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ. ಪುನಃ ದಕ್ಷಿಣ ಆಫ್ರಿಕಾ ಅಗತ್ಯ ಓವರ್ ರೇಟ್‌ನಲ್ಲಿ ಕೊರತೆ ಬಿದ್ದರೆ, ವಿಶ್ವಕಪ್‌ನ ಒಂದು ಪಂದ್ಯದಲ್ಲಿ ಡಿ ವಿಲಿಯರ್ಸ್ ಅವರನ್ನು ಅಮಾನತುಗೊಳಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ