ಹಶೀಮ್ ಆಮ್ಲಾ ಮತ್ತು ಡು ಪ್ಲೆಸಿಸ್ ಅವರ 2 ನೇ ವಿಕೆಟ್ಗೆ 247 ರನ್ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವೆ ಕ್ಯಾನ್ಬೆರಾದ ಮನುಕಾ ಓವಲ್ನಲ್ಲಿ ನಡೆಯುತ್ತಿರುವ ವಿಶ್ವ ಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಐರ್ಲೆಂಡ್ಗೆ 412 ರನ್ಗಳ ಬೃಹತ್ ಮೊತ್ತದ ಸವಾಲನ್ನು ಒಡ್ಡಿದೆ. ಹಶೀಮ್ ಆಮ್ಲಾ 128 ಎಸೆತಗಳಲ್ಲಿ ಭರ್ಜರಿ 159 ರನ್ ಸ್ಕೋರ್ ಮಾಡಿದ್ದು ಅವರ ಸ್ಕೋರಿನಲ್ಲಿ 16 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರುಗಳಿದ್ದವು.
300 ರನ್ ಗುರಿಯನ್ನು ಮುಟ್ಟಿದ್ದ ಐರ್ಲೆಂಡ್ ಆಟಗಾರರಿಗೆ 400ರ ಗಡಿ ದಾಟುವುದು ಹರಸಾಹಸವಾಗಿದ್ದು, ದಕ್ಷಿಣ ಆಫ್ರಿಕಾ ಇನ್ನೊಂದು ಗೆಲವು ಗಳಿಸುವುದು ನಿಶ್ಚಿತವೆನಿಸಿದೆ.
ಐರ್ಲಂಡ್ ಪರ ಆಂಡಿ ಮೆಕ್ಬ್ರೈನ್ 2 ವಿಕೆಟ್ ಗಳಿಸಿದರೆ ಮೂನಿ ಮತ್ತು ಕೆವಿನ್ ಓಬ್ರೈನ್ ತಲಾ ಒಂದು ವಿಕೆಟ್ ಗಳಿಸಿದರು.