ಶ್ರೀಲಂಕಾ ವಿರುದ್ಧ ಗೆಲ್ಲುವ ವಿಶ್ವಾಸವಿದೆ: ಎಬಿಡಿ.ವಿಲ್ಲಿಯರ್ಸ್

ಮಂಗಳವಾರ, 17 ಮಾರ್ಚ್ 2015 (16:39 IST)
ಶ್ರೀಲಂಕಾ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲ್ಲಿಯರ್ಸ್ ಹೇಳಿದ್ದಾರೆ.

ಕ್ವಾರ್ಟರ್‌ಫೈನಲ್ ಪಂದ್ಯದವರೆಗೆ ತಂಡದ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ಇಂದು ಕೆಲ ಗಂಟೆಗಳವರೆಗೆ ಮಾತ್ರ ಅಭ್ಯಾಸ ಮಾಡಲಾಗಿತ್ತು. ಲಂಕಾ ವಿರುದ್ಧದ ಪಂದ್ಯ ತುಂಬಾ ರೋಚಕವಾಗಿರುತ್ತದೆ ಎನ್ನುವುದು ನಮ್ಮ ಭಾವನೆ ಎಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ವಿಶ್ವಕಪ್‌ಗಾಗಿ ತಂಡವನ್ನು ಸಜ್ಜುಗೊಳಿಸಿದ್ದೇವೆ. ದಕ್ಷಿಣ ಆಫ್ರಿಕಾ ತಂಡಕ್ಕೆ ವಿಶ್ವಕಪ್ ಗೆಲ್ಲುವ ಅವಕಾಶಗಳಿವೆ. ಆದರೆ, ಸೂಕ್ತ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದೇವೆ. ಹಿಂದಿನ ಫಲಿತಾಂಶಗಳಿಂದ ತಕ್ಕ ಪಾಠ ಕಲಿತಿದ್ದೇವೆ ಎಂದು ತಿಳಿಸಿದ್ದಾರೆ.  

ತಂಡದ ನಾಯಕನಾಗಿ ಸಹ ಆಟಗಾರರಿಗೆ ಪ್ರೋತ್ಸಾಹ ನೀಡಿ ಉತ್ತೇಜಿತಗೊಳಿಸಬೇಕಾಗಿದೆ. ತಂಡದಲ್ಲಿರುವ ಹಿರಿಯ ಆಟಗಾರರ ಸಲಹೆಗಳನ್ನು ಪಡೆದು ತಂಡವನ್ನು ಮುನ್ನಡೆಸುತ್ತೇನೆ. ತಂಡದ ಆಟಗಾರರು ಸುಲಭವಾಗಿ ನನ್ನ ಸಲಹೆಗಳನ್ನು ಪಾಲಿಸುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ