ವಿಶ್ವಕಪ್ ಮರಳಿ ಗಳಿಸಲು ಯುವ ಬೌಲರುಗಳನ್ನು ಪಳಗಿಸಬೇಕು: ವೆಂಗ್‌ಸರ್ಕಾರ್

ಮಂಗಳವಾರ, 31 ಮಾರ್ಚ್ 2015 (12:56 IST)
ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆಯುವ ಮುಂದಿನ ವಿಶ್ವಕಪ್ ಗೆಲುವಿಗೆ ನೀಲನಕ್ಷೆ ರೂಪಿಸಿರುವ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್ಸರ್ಕಾರ್ ಕ್ರಿಕೆಟ್ ಆಡಳಿತವು ಕೆಲವು ಯುವ ಪೇಸ್ ಮತ್ತು ಸ್ಪಿನ್ ಬೌಲರ್‌‌ಗಳನ್ನು ಪತ್ತೆಹಚ್ಚಿ ಇಲ್ಲಿ ಕ್ರಿಕೆಟ್ ಸೀಸನ್ ಇಲ್ಲದಿರುವ ವೇಳೆ ಕೌಂಟಿ ಕ್ರಿಕೆಟ್‌ನಲ್ಲಿ ಆಟವಾಡುವಂತೆ ಮಾಡಬೇಕು ಎಂದು ಹೇಳಿದರು. ಭಾರತಕ್ಕಾಗಿ ಆಡುವ  23 ವರ್ಷಕ್ಕಿಂತ ಕೆಳಗಿನ ವಯೋಮಾನ ಕನಿಷ್ಠ 6 ಯುವ ವೇಗದ ಬೌಲರುಗಳು ಮತ್ತು ಸ್ಪಿನ್ನರುಗಳನ್ನು ಪತ್ತೆ ಹಚ್ಚಿ ಕೌಂಟಿ ಕ್ರಿಕೆಟ್‌ನಲ್ಲಿ ಕನಿಷ್ಠ ಮೂರು ತಿಂಗಳು ಕಳೆಯುವಂತೆ ಮಾಡಬೇಕು. ಅಲ್ಲಿ ಅವರು ಅತೀ ವೇಗವಾಗಿ ಆಟದ ಒಳಹೊರಗನ್ನು ಕಲಿಯುತ್ತಾರೆ ಎಂದು ಹೇಳಿದರು. 

ಅವರನ್ನು ಭಾರತದ ಬೌಲಿಂಗ್ ಕೋಚ್ ನಿಗಾವಹಿಸಬೇಕು. ಕೌಂಟಿ ಕೋಚ್ ಮೂಲಕ ಅವರ ಬೆಳವಣಿಗೆಯನ್ನು ತಿಳಿಯಬೇಕು. ಕಲಿಕೆ ಮತ್ತು ಸುಧಾರಣೆಗೆ ಯುವ ಕ್ರಿಕೆಟಿಗರಿಗೆ ಇಂಗ್ಲೆಂಡ್ ಉತ್ತಮ ಸ್ಥಳ ಎಂದು ವೆಂಗ್ಸರ್ಕಾರ್ ಹೇಳಿದರು. ಧೋನಿಗೆ ಸಂಬಂಧಿಸಿದಂತೆ  ಮಾತನಾಡಿದ ಅವರು ವೃತ್ತಿಜೀವನದುದ್ದಕ್ಕೂ ಮನೋಜ್ಞ ಕ್ರಿಕೆಟ್ ಆಡಿದರು. 2019ರ ವಿಶ್ವಕಪ್ ಭಾಗವಾಗಲು ಅವರು ಇಷ್ಟಪಡುತ್ತಾರೆಂದು ನನಗೆ ಖಾತರಿಯಿದೆ. ಆದರೆ ಅವರ ಫಾರಂ, ಫಿಟ್ನೆಸ್ ಮತ್ತು ಪ್ರೇರಣೆ ಮಟ್ಟವು ಚೆನ್ನಾಗಿದ್ದರೆ 2019ರ ವಿಶ್ವಕಪ್‌ನಲ್ಲಿ ಆಡುತ್ತಾರೆ ಎಂದು ಹೇಳಿದರು. 
 
ಮೊದಲಿಗೆ ಪರ್ಯಾಯ ಆಟಗಾರರ ಬಲವನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಅಂಡರ್ 19 ಮತ್ತು ಎ ಟೀಂಗಳಿಗೆ ದೃಡ ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮಗಳೊಂದಿಗೆ ಅದನ್ನು ನೆರವೇರಿಸಬೇಕಾಗಿದೆ ಎಂದು ವೆಂಗ್ಸರ್ಕಾರ್ ಹೇಳಿದರು. ಭಾರತವು ಜೂನಿಯರ್ ಮಟ್ಟದಲ್ಲಿ ಪ್ರತಿಭಾಶಾಲಿಗಳನ್ನು ಹೊಂದಿದ್ದು, ಉನ್ನತ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗುವಂತೆ ಅವರನ್ನು ಪಳಗಿಸುವ ವ್ಯವಸ್ಥೆಯ ಅಭಾವವಿದೆ  ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ