ದೆಹಲಿ ಕೋರ್ಟ್‌ನಿಂದ ಕ್ಲೀನ್ ಚಿಟ್ ಬಳಿಕ ಶ್ರೀಶಾಂತ್ ನೆಟ್ ಅಭ್ಯಾಸ

ಸೋಮವಾರ, 27 ಜುಲೈ 2015 (13:38 IST)
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದರಿಂದ ಶ್ರೀಶಾಂತ್ ನೆಟ್ ಎಡಾಪಲ್ಲಿ ಶಾಲಾ ಮೈದಾನದಲ್ಲಿ ಅಭ್ಯಾಸವನ್ನು ಆರಂಭಿಸಿದ್ದಾರೆ.  ಶ್ರೀಶಾಂತ್ ಸೇರಿದಂತೆ ಅಂಕಿತ್ ಚವ್ಹಾಣ್, ಅಜಿತ್ ಚಾಂಡಿಲಾ ಸೇರಿದಂತೆ ಎಲ್ಲಾ 36 ಆರೋಪಿಗಳನ್ನು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟಿಯಾಲಾ ಹೌಸ್ ಕೋರ್ಟ್ ದೋಷಮುಕ್ತಿಗೊಳಿಸಿದೆ. 
 
ಕೋರ್ಟ್ ತೀರ್ಪಿನ ಬಳಿಕವು ಬಿಸಿಸಿಐ ಶ್ರೀಶಾಂತ್ ವಿರುದ್ಧದ ನಿಷೇಧದ ನಿರ್ಧಾರವನ್ನು ಬದಲಿಸಲು ನಿರಾಕರಿಸಿದೆ. ಆದರೆ ಶ್ರೀಶಾಂತ್ ಪುನಃ ಸ್ಪರ್ಧಾತ್ಮಕ ಕ್ರಿಕೆಟ್‌‌ಗೆ ಕಮ್‌ಬ್ಯಾತ್ ಆಗಲು ಬಿಸಿಸಿಐಗೆ ತಮ್ಮ ಫಿಟ್ನೆಸ್ ತೋರಿಸಲು ಉತ್ಸುಕರಾಗಿದ್ದಾರೆ. ಅಭ್ಯಾಸಕ್ಕಾಗಿ ಸಂಜೆ ಅವರು ಮೈದಾನಕ್ಕೆ ಮುಟ್ಟಿದಾಗ ಅವರ ಅಭಿಮಾನಿಗಳು ಅವರಿಗೆ ಹಾರ್ದಿಕ ಸ್ವಾಗತ ನೀಡಿದರು. 
 
ಅವರ ಮಾರ್ಗದರ್ಶಿ ಶಿವಕುಮಾರ್ ನೆಟ್‌‍ನಲ್ಲಿ ಶ್ರೀಶಾಂತ್ ಅವರ ಕೆಲವು ಎಸೆತಗಳನ್ನು ಎದುರಿಸಿದರು.  ನಿಷೇಧದಿಂದಾಗಿ ಕೇರಳ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆಡಲು ಅವಕಾಶ ಸಿಗದ ಶ್ರೀಶಾಂತ್ ತಮ್ಮ ಬಾಲ್ಯದ ದಿನಗಳಲ್ಲಿ ತನ್ನ ತಂದೆ ಶಾಂತಕುಮಾರನ್ ನಾಯರ್ ಮತ್ತು ಶಿವಕುಮಾರ್ ಜೊತೆ ಅಭ್ಯಾಸ ನಡೆಸಿದ್ದ ಶಾಲಾ ಮೈದಾನದಲ್ಲಿ ಆಡುವಾಗ ಹಳೆಯ ನೆನಪುಗಳು ಸುಳಿದು ಭಾವುಕರಾದರು. 

ವೆಬ್ದುನಿಯಾವನ್ನು ಓದಿ