ಕ್ರಿಕೆಟ್ ಚೆಂಡು ತಲೆಗೆ ಬಡಿದು ಶ್ರೀಲಂಕಾ ಓಪನರ್ ಕೌಶಲ್ ಸಿಲ್ವಾ ಆಸ್ಪತ್ರೆಗೆ

ಸೋಮವಾರ, 25 ಏಪ್ರಿಲ್ 2016 (12:03 IST)
ಶ್ರೀಲಂಕಾದ ಟೆಸ್ಟ್ ಓಪನರ್ ಕೌಶಲ್ ಸಿಲ್ವಾ ಅವರು ಸ್ಥಳೀಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ತಲೆಗೆ ಚೆಂಡು ಬಡಿದು ಆಸ್ಪತ್ರೆಗೆ ಸೇರಿದ ಘಟನೆ ಸಂಭವಿಸಿದೆ. ಪಾಲ್ಲೆಕೆಲೆಯಲ್ಲಿ ಪಂದ್ಯ ನಡೆಯುವಾಗ ಅವರ ತಲೆಗೆ ಚೆಂಡು ಬಡಿದಿತ್ತು. ಆಸ್ಪತ್ರೆಯಲ್ಲಿ ಸ್ಕಾನ್ ಮಾಡಿದಾಗ ಯಾವುದೇ ತೊಂದರೆ ಕಂಡುಬಂದಿಲ್ಲ. ಆದರೆ ಮತ್ತಷ್ಟು ಪರೀಕ್ಷೆ ಮತ್ತು ನಿಗಾಕ್ಕೆ ಅವರನ್ನು ಕೊಲಂಬೊದ ಆಸ್ಪತ್ರೆಗೆ ತರಲಾಗಿದೆ ಎಂದು ಕ್ರಿಕೆಟ್ ಸಂಸ್ಥೆ ಹೇಳಿದೆ.
 
 ಸಿಲ್ವಾ 24 ಟೆಸ್ಟ್ ಪಂದ್ಯಗಳನ್ನು ಶ್ರೀಲಂಕಾ ಪರ ಮಾಡಿದ್ದು, 31 ರನ್ ಸರಾಸರಿಯಲ್ಲಿ 1,404 ರನ್ ಸ್ಕೋರ್ ಮಾಡಿದ್ದರು.  ಕೌಶಲ್ ಅವರು ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡು ಬಡಿಯಿತು. ಸಿಲ್ವಾ ಹೆಚ್ಚುವರಿ ಪ್ಯಾಡಿಂಗ್‍ನೊಂದಿಗೆ ಹೆಲ್ಮೆಟ್ ಧರಿಸಿದ್ದರು.

ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ 2015ರ ನವೆಂಬರ್‌ನಲ್ಲಿ ತಲೆಗೆ ಚೆಂಡು ಬಡಿದು ಮೃತಪಟ್ಟ ಬಳಿಕ ಆಟಗಾರರ ಸುರಕ್ಷತೆಗಾಗಿ ಈ ವಿನ್ಯಾಸವನ್ನು ಜಾರಿಗೆ ತರಲಾಗಿತ್ತು. 
ಭಾನುವಾರದ ಪಂದ್ಯವು ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸಕ್ಕೆ ಶ್ರೀಲಂಕಾ ಸಿದ್ಧತೆಯ ಭಾಗವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

 

ವೆಬ್ದುನಿಯಾವನ್ನು ಓದಿ