ಬಲಾಢ್ಯ ಟೀಂ ಇಂಡಿಯಾಗೆ ಲಂಕಾ ಕೊಟ್ಟ ಸಾಧಾರಣ ಮೊತ್ತ

ಗುರುವಾರ, 24 ಆಗಸ್ಟ್ 2017 (18:06 IST)
ಪಲ್ಲಿಕೆಲೆ: ಮಧ್ಯಮಕ್ರಮಾಂಕ ಸರಿಯಾಗಿ ತನ್ನ ಕರ್ತವ್ಯ ನಿರ್ವಹಿಸದಿದ್ದರೆ ಇನಿಂಗ್ಸ್ ಕತೆ ಏನಾಗುತ್ತದೆ ಎನ್ನುವುದನ್ನು ಇಂದು ಶ್ರೀಲಂಕಾ ಅರ್ಥ ಮಾಡಿಕೊಂಡಿರಬಹುದು.

 
ಆರಂಭಿಕರು ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಭಾರತದ ವಿರುದ್ಧ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಲು ಶಕ್ತವಾಗಿದೆ.

ಭಾರತದ ಬಲಾಢ್ಯ ಬ್ಯಾಟಿಂಗ್ ಗೆ ಇದು ದೊಡ್ಡ ಮೊತ್ತವೇನಲ್ಲ. ಆರಂಭಿಕರು 40 ರನ್ ಪೇರಿಸುವ ಮೂಲಕ ಉತ್ತಮ ಮೊತ್ತ ಕಲೆ ಹಾಕುವ ಸೂಚನೆ ನೀಡಿದರೂ, ನಂತರ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದರೆ ಅಂತಿಮವಾಗಿ ಸಿರಿವರ್ಧನ ಅರ್ಧಶತಕ ಮತ್ತು ಕಪುಗಡೆರ 40 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ನೀಡಿದರು.

ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಿತ್ತರು. ಯಜುವೇಂದ್ರ ಚಾಹಲ್ 2 ಹಾಗೂ ಪಾಂಡ್ಯ ಮತ್ತು ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್ ಕಿತ್ತರು.

ಇದನ್ನೂ ಓದಿ.. ಎಂಸ್ ಧೋನಿ ಈಗ ವಿಕೆಟ್ ಹಿಂದೆ 99 ನಾಟೌಟ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ