ಎರಡನೇ ಏಕದಿನ: ಆಸೀಸ್ ವಿರುದ್ಧ ಶ್ರೀಲಂಕಾ 288 ರನ್

ಬುಧವಾರ, 24 ಆಗಸ್ಟ್ 2016 (18:57 IST)
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಏಕ ದಿನ ಪಂದ್ಯದಲ್ಲಿ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 288 ರನ್‌ಗಳಿಗೆ ಆಲೌಟ್ ಆಗಿದೆ.  ಜೇಮ್ಸ್ ಫಾಕ್ನರ್ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿದ  6ನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು.

ಕುಸಾಲ್ ಪೆರೀರಾ, ಮ್ಯಾಥೀವ್ಸ್ ಮತ್ತು ತೀಸರಾ ಪೆರೀರಾ ಅವರ ವಿಕೆಟ್‌ಗಳನ್ನು ಅವರು ಕಬಳಿಸಿದರು. ಶ್ರೀಲಂಕಾ ಕೊನೆಯ 5 ವಿಕೆಟ್‌ಗಳನ್ನು ಕೇವಲ 27 ರನ್‌ಗಳಿಗೆ ಕಳೆದುಕೊಂಡಿತು. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಶ್ಲಾಘನೀಯ ಮೊತ್ತವನ್ನು ಮುಟ್ಟಿ ಆಸ್ಟ್ರೇಲಿಯಾಗೆ ಸವಾಲು ಹಾಕಿದೆ.

ಶ್ರೀಲಂಕಾ ಮೊದಲೆರಡು ವಿಕೆಟ್ ಬೇಗನೇ ಕಳೆದುಕೊಂಡ ಬಳಿಕ ಚಾಂಡಿಮಾಲ್ ಮತ್ತು ಕುಸಾಲ್ ಮೆಂಡಿಸ್ ಮೂರನೇ ವಿಕೆಟ್‌ಗೆ 125 ರನ್ ಜತೆಯಾಟವಾಡಿದರು. ಆತಿಥೇಯರಿಗೆ ಎಲ್ಲವೂ ಸುಸೂತ್ರವಾಗಿದೆಯೆಂದು ಅನಿಸಿದ್ದಾಗ ಜಾಂಪಾ ಮಧ್ಯಮಕ್ರಮಾಂಕ ಕುಸಿಯುವಂತೆ ಮಾಡಿದರು.  ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡು 14 ರನ್ ಸ್ಕೋರ್ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ