ಶತಕ ಸಿಡಿಸಿ ಭಾರತವನ್ನ ಕಾಡಿದ ರನ್ ಮೆಶಿನ್ ಸ್ಟೀವ್ ಸ್ಮಿತ್

ಶನಿವಾರ, 25 ಫೆಬ್ರವರಿ 2017 (11:33 IST)
ವಿಶ್ವದ ಯಾವುದೇ ಪಿಚ್`ಗಳಲ್ಲೂ  ಶ್ರೇಷ್ಠ ಪ್ರದರ್ಶನ ನೀಡುವ ಖ್ಯಾತಿಗೆ ಪಾತ್ರವಾಗಿರುವ ಆಸ್ಟ್ರೇಲಿಯಾದ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಪುಣೆ ಟೆಸ್ಟ್`ನ 2ನೇ ಇನ್ನಿಂಗ್ಸ್`ನಲ್ಲಿ ಶತಕ ಸಿಡಿಸಿ ಭಾರತದ ಬೌಲರ್`ಗಳನ್ನ ಇನ್ನಿಲ್ಲದಂತೆ ಕಾಡಿದ್ದಾರೆ.


ಟರ್ನಿಂಗ್ ಪಿಚ್`ನಲ್ಲಿ ಭಾರತೀಯ ಬೌಲರ್`ಗಳ ಬೆವರಿಳಿಸಿದ ಸ್ಮಿತ್, 202 ಎಸೆತಗಳಲ್ಲಿ 109 ರನ್ ಚಚ್ಚಿದರು. ಇದರಲ್ಲಿ 11 ಬೌಂಡರಿಗಳಿದ್ದವು. ಸ್ಮಿತ್ ಭಾರತದ ನೆಲದಲ್ಲಿ ಸಿಡಿಸಿದ ಮೊದಲ ಶತಕ ಇದಾಗಿದ್ದು, ಭಾರತ ವಿರುದ್ಧದ 5ನೇ ಶತಕವಾಗಿದೆ.

ಬ್ಯಾಟಿಂಗ್`ಗೆ ಕಷ್ಟಕರವಾದ ಪಿಚ್`ನಲ್ಲೂ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ಸ್ಮಿತ್ ಅಮೋಘ ಶತಕ ಸಿಡಿಸಿದರು. ಶತಕ ಪೂರೈಸುತ್ತಲೇ ಹೆಲ್ಮೆಟ್ ತೆಗೆದು ಗಾಳಿಗೆ ಪಂಚ್ ನೀಡಿ ಸಂಭ್ರಮಿಸಿದರು.

ವೆಬ್ದುನಿಯಾವನ್ನು ಓದಿ