ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ ದಟ್ಟಣೆಯ ಆಸ್ಟ್ರೇಲಿಯಾ ಬೇಸಿಗೆ ಸರಣಿಗಳಿಗೆ ಮುನ್ನ ವಿಶ್ರಾಂತಿ ತೆಗೆದುಕೊಳ್ಳಲಿದ್ದು, ಶ್ರೀಲಂಕಾದಲ್ಲಿ ಏಕದಿನ ಅಂತಾರಾಷ್ಟ್ರೀಯ ಸರಣಿಯ ಉಳಿದ ಪಂದ್ಯಗಳಿಗೆ ಮಿಸ್ ಆಗಲಿದ್ದಾರೆ. ಸ್ಮಿತ್ ಅವರ ಡೆಪ್ಯೂಟಿ ಡೇವಿಡ್ ವಾರ್ನರ್ ಅವರು ಮುಂದಿನ ಮೂರು ಏಕದಿನಗಳಿಗೆ ಮತ್ತು ಎರಡು 2 ಟ್ವೆಂಟಿಗಳಿಗೆ ತಂಡಕ್ಕೆ ನಾಯಕತ್ವ ವಹಿಸಲಿದ್ದಾರೆ.
ಮುಂದಿನ 12 ತಿಂಗಳಲ್ಲಿ ಸ್ಟೀವನ್ ಅಪಾರ ಪ್ರಮಾಣದಲ್ಲಿ ಕ್ರಿಕೆಟ್ ಆಡಲಿದ್ದಾರೆ. ಸ್ಟೀವನ್ ಅವರು ವಿಶ್ರಾಂತಿ ಮೂಲಕ ಚೈತನ್ಯ ತುಂಬಿಕೊಳ್ಳಲು ನಾವು ಕಾಲಾವಕಾಶ ಬಯಸಿದ್ದು, ಕೊನೆಯ ಐದು ಪಂದ್ಯಗಳು ಅದಕ್ಕೆ ಉತ್ತಮ ಅವಕಾಶವಾಗಿದೆ. ಮೊದಲ ಎರಡು ಪಂದ್ಯಗಳ ಫಲಿತಾಂಶ ಏನೇ ಇರಲಿ, ಸ್ಟೀವ್ ವಿರಾಮ ತೆಗೆದುಕೊಂಡು ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಹೊಸ ಹುರುಪಿನಿಂದ ಸ್ಟೀವ್ ಆಡಬೇಕೆಂಬುದು ನಮ್ಮ ಯೋಜನೆಯಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ರಾಷ್ಟ್ರೀಯ ಆಯ್ಕೆದಾರ ರಾಡ್ ಮಾರ್ಶ್ ಹೇಳಿದರು.