ಭಾರತದ ಕೋಚಿಂಗ್ ಪಾತ್ರ ವಹಿಸಲು ತಾವು ಸಿದ್ಧ: ಸ್ಟುವರ್ಟ್ ಲಾ

ಶುಕ್ರವಾರ, 31 ಜುಲೈ 2015 (16:13 IST)
ಬಿಸಿಸಿಐ ಟೀಂ ಇಂಡಿಯಾಗೆ ಹೊಸ ಕೋಚ್‌ಗೆ ಹುಡುಕುತ್ತಿರುವ ಸಂದರ್ಭದಲ್ಲಿ  ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಸ್ಟುವರ್ಟ್ ಲಾ  ಕೋಚ್‌ ಹುದ್ದೆ ವಹಿಸಿದರೆ ತಾವು ನಿರ್ವಹಿಸಲು ಸಿದ್ದವಿರುವುದಾಗಿ ಹೇಳಿದ್ದಾರೆ. ನಾನು ಜಗತ್ತಿನ ಕೆಲವು ಮಹಾನ್ ಆಟಗಾರರ ಜತೆ ಕೆಲಸ ಮಾಡಲು ಬಯಸುತ್ತೇನೆ.  ನಾನು ಉಪಖಂಡದಲ್ಲಿ ಕೆಲವು ಸಮಯ ಕಳೆದಿದ್ದು ಇಲ್ಲಿನ ಪರಿಸ್ಥಿತಿಯ ಅರಿವಿದೆ. ಆದ್ದರಿಂದ ಯಾರೇ ಕೋಚ್ ಹುದ್ದೆಗೆ ಬಾಗಿಲು ತಟ್ಟಿದರೂ ಕುಳಿತುಕೊಂಡು ಅವರ ಆಫರ್ ಕೇಳುವುದಕ್ಕೆ ಸಂತಸವಾಗುತ್ತದೆ ಎಂದು ಸ್ಟುವರ್ಟ್ ಲಾ ಹೇಳಿದರು.
 
46 ವರ್ಷದ ಸ್ಟುವರ್ಟ್ 2011ರ ವಿಶ್ವಕಪ್ ಬಳಿಕ ಶ್ರೀಲಂಕಾಗೆ ಕೋಚ್ ಸೇವೆ ನೀಡಿದ್ದರು. ಬಳಿಕ ಬಾಂಗ್ಲಾದೇಶದ ಕಾರ್ಯಭಾರ ನಿರ್ವಹಿಸಿದರು. 2012ರಲ್ಲಿ ಸ್ವದೇಶದಲ್ಲಿ ಏಷ್ಯಾ ಕಪ್ ಫೈನಲ್ ಪ್ರವೇಶಿಸಿದ ಬಾಂಗ್ಲಾದೇಶ ತಂಡದ ಉಸ್ತುವಾರಿಯನ್ನು ಅವರು ವಹಿಸಿಕೊಂಡಿದ್ದರು. 
 
ಭಾರತ ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್ ಸರಣಿಯಲ್ಲಿ ಫೇವರಿಟ್ ಆಗಿ ಆರಂಭಿಸಲಿದೆ . ಶ್ರೀಲಂಕಾ ಮರುರಚನೆಯ ಹಂತವನ್ನು ಕ್ರಮಿಸುತ್ತಿದೆ. ಯುವಕರು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಕಾತುರರಾಗಿದ್ದಾರೆ. ಅವರದ್ದೇ ನೆಲದಲ್ಲಿ ಶ್ರೀಲಂಕಾವನ್ನು ಸೋಲಿಸುವುದು ಕಠಿಣ. ಇನ್ನೊಂದು ಕಡೆ ಬಾಂಗ್ಲಾದೇಶದ ವಿರುದ್ಧ ಭಾರತ ಚೆನ್ನಾಗಿ ಆಡಿಲ್ಲ. ಅವರು ಸಾಮರ್ಥ್ಯವನ್ನು ಸಾಬೀತು ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಆದರೂ ಭಾರತಕ್ಕೆ ಸರಣಿ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಲಾ ಹೇಳಿದರು.

ವೆಬ್ದುನಿಯಾವನ್ನು ಓದಿ