ವಿರಾಟ್ ಕೊಹ್ಲಿ, ಸಚಿನ್ ಮನವಿಗೆ ಕೊನೆಗೂ ಸಿಕ್ತು ಅದ್ಭುತ ರೆಸ್ಪಾನ್ಸ್!
ನಿನ್ನೆ ಮುಂಬೈನಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ನ ಭಾರತ ಮತ್ತು ಕೀನ್ಯಾ ನಡುವಿನ ಪಂದ್ಯದ ಟಿಕೆಟ್ ಗಳು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿತ್ತು.
ನಮ್ಮನ್ನು ಬೈಯಿರಿ, ಟೀಕೆ ಮಾಡಿ ಆದರೆ ನಾವು ಎಲ್ಲೇ ಆಡುತ್ತಿದ್ದರೂ ಭಾರತೀಯ ಫುಟ್ ಬಾಲ್ ನ್ನು ಬೆಂಬಲಿಸಿ ಎಂದು ಸುನಿಲ್ ಚೆಟ್ರಿ ಟ್ವೀಟ್ ಮಾಡಿದ್ದರು. ಇದಕ್ಕೆ ಬೆಂಬಲವಾಗಿ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ವಿಡಿಯೋ ಸಂದೇಶ ನೀಡಿದ್ದರು. ಅದಕ್ಕೆ ಅಭಿಮಾನಿಗಳು ಅದ್ಭುತವಾಗಿಯೇ ಪ್ರತಿಕ್ರಿಯಿಸಿದ್ದಾರೆ. ವಿಶೇಷವೆಂದರೆ ಸುನಿಲ್ ಚೆಟ್ರಿ ಆಡಿದ ಈ ನೂರನೇ ಪಂದ್ಯದಲ್ಲಿ ಭಾರತ ಜಯಗಳಿಸಿದ್ದಲ್ಲದೆ, ಸ್ವತಃ ಚೆಟ್ರಿ 2 ಗೋಲು ಗಳಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.