ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಪಾಕ್ ಗೆ ನೆರವಾಗಿದ್ದ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಇವರಿಬ್ಬರೂ ವೀಕ್ಷಕ ವಿವರಣೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ರವಿಶಾಸ್ತ್ರಿ ಮತ್ತು ಗವಾಸ್ಕರ್ ಪಾಕಿಸ್ತಾನಕ್ಕೆ ಚಾಂಪಿಯನ್ ಆಗುವ ಯಾವುದೇ ಅವಕಾಶವಿಲ್ಲ ಎಂಬಂತೆ ಉಡಾಫೆಯಿಂದ ಮಾತನಾಡುತ್ತಿದ್ದರು.
ಇದನ್ನು ಕೇಳಿ ಪಾಕ್ ಆಟಗಾರರಿಗೆ ಉರಿದುಹೋಯ್ತಂತೆ. ಆದರೆ ಈ ಬಗ್ಗೆ ಪತ್ರಿಕಾ ಹೇಳಿಕೆ ಕೊಡುವುದರ ಬದಲು ಬ್ಯಾಟ್ ಮತ್ತು ಬೌಲ್ ನಿಂದಲೇ ಮಾತನಾಡೋಣ ಎಂದು ತೀರ್ಮಾನಿಸಿದೆವು. ಅದರಂತೆ ಆಡಿ ಗೆದ್ದೆವು ಎಂದು ತಲತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.