ಸುನಿಲ್ ನಾರಾಯಣ್‌ಗೆ ನಿಷೇಧ : ಐಪಿಎಲ್‌ನಿಂದ ಹೊರಗುಳಿಯಲು ಕೆಕೆಆರ್ ಪರಿಶೀಲನೆ

ಸೋಮವಾರ, 30 ಮಾರ್ಚ್ 2015 (13:16 IST)
ಐಪಿಎಲ್ 8ನೇ ಆವೃತ್ತಿ ಆರಂಭಕ್ಕೆ ಇನ್ನು ಕೇವಲ 9 ದಿನಗಳು ಬಾಕಿವುಳಿದಿರುವಂತೆ,  ಕೊಲ್ಕತ್ತಾ ನೈಟ್ ರೈಡರ್ಸ್  ಆಫ್‌ಸ್ಪಿನ್ನರ್ ಸುನಿಲ್ ನಾರಾಯಣ್ ಸರಣಿಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಜತೆ ಸಂಘರ್ಷಕ್ಕೆ ಇಳಿದಿದೆ.  2014ರ ಚಾಂಪಿಯನ್ಸ್ ಲೀಗ್ ಟ್ವೆಂಟಿ 20ಯಲ್ಲಿ ಶಂಕಿತ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ ನಾರಾಯಣ್ ಅವರಿಗೆ ನಿಷೇಧ ವಿಧಿಸಲಾಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ಸ್‌ನಲ್ಲಿ ಆಡಲಾಗದೇ ಕೆಕೆಆರ್ 8 ವಿಕೆಟ್‌ಗಳಿಂದ ಸೋತಿತ್ತು.  ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೂಡ ಅವರನ್ನು ಆರಿಸಿರಲಿಲ್ಲ. 2015ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೂಡ ಅವರನ್ನು ಕೈಬಿಡಲಾಗಿತ್ತು. ಅವರ ಬಯೋಮೆಕಾನಿಕಲ್ ಪರೀಕ್ಷೆ ಸಂದರ್ಭದಲ್ಲಿ ಐಸಿಸಿ ಅವರ ಬೌಲಿಂಗ್ ಶೈಲಿಯನ್ನು ದೋಷಮುಕ್ತಗೊಳಿಸಿತು. ಐಸಿಸಿ ವರದಿಯನ್ನು ಬಿಸಿಸಿಐ ಒಪ್ಪಿಕೊಳ್ಳಲು ತಯಾರಿಲ್ಲದೇ ಚೆನ್ನೈನಲ್ಲಿ ಇನ್ನೊಂದು ಪರೀಕ್ಷೆಗೆ ನಾರಾಯಣ್ ಸಿದ್ಧರಾಗಬೇಕೆಂದು ತಿಳಿಸಿದೆ.

ಆದರೆ ಕೆಕೆಆರ್ ಇದಕ್ಕೆ ಒಪ್ಪದೇ ಬಿಸಿಸಿಐ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸಿದೆ. ನಾರಾಯಣ್ ಅವರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡದಿದ್ದರೆ, ಕೆಕೆಆರ್ ಪಂದ್ಯಾವಳಿಯಿಂದ ಹೊರಗುಳಿಯಬಹುದೆಂದು ವರದಿಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ