ಸುನಿಲ್ ನಾರಾಯಣ್ ಮತ್ತೊಂದು ಬೌಲಿಂಗ್ ಶೈಲಿ ಪರೀಕ್ಷೆಗೆ ಹಾಜರಾಗಬೇಕು: ದಾಲ್ಮಿಯಾ

ಗುರುವಾರ, 2 ಏಪ್ರಿಲ್ 2015 (10:57 IST)
ಕೊಲ್ಕತ್ತಾ ನೈಟ್ ರೈಡರ್ಸ್ ಸ್ಪಿನ್ನರ್ ಸುನಿಲ್ ನಾರಾಯಣ್ ಅವರ ಬೌಲಿಂಗ್ ಶೈಲಿಗೆ ಐಸಿಸಿ ಹಸಿರು ನಿಶಾನೆ ನೀಡಿದ್ದರೂ ವೆಸ್ಟ್ ಇಂಡೀಸ್ ಆಟಗಾರ ಚೆನ್ನೈನಲ್ಲಿ ಇನ್ನೊಂದು ಪರೀಕ್ಷೆಗೆ ಹಾಜರಾಗಬೇಕು ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಬುಧವಾರ ತಿಳಿಸಿದರು. ಚೆನ್ನೈನ ಶ್ರೀ ರಾಮಚಂದ್ರ ವಿವಿಯಲ್ಲಿ ಈ ಪರೀಕ್ಷೆ ನಡೆಯುತ್ತದೆ ಎಂದು ದಾಲ್ಮಿಯಾ ಕಚೇರಿ ತಿಳಿಸಿದೆ.
 
ನಾರಾಯಣ್ ಅವರನ್ನು 2014ರ ಚಾಂಪಿಯನ್ಸ್ ಲೀ ಟ್ವೆಂಟಿ20ಯಲ್ಲಿ ಶಂಕಾಸ್ಪದ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ ನಿಷೇಧಿಸಲಾಗಿತ್ತು. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ನೈಟ್ ರೈಡರ್ಸ್ 8 ವಿಕೆಟ್‌ಗಳಿಂದ ಸೋತಿತ್ತು.
 
ನಂತರ ಅವರನ್ನು ಭಾರತದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೂಡ ಕೈಬಿಡಲಾಗಿದ್ದು, ನಿಗೂಢ ಸ್ಪಿನ್ನರ್ 2015ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡದೇ ಹೊರಗುಳಿದಿದ್ದರು. 
ವೆಸ್ಟ್ ಇಂಡೀಸ್ ಆಟಗಾರ ಪುನಃ ನೆಟ್‌ಗೆ ಹಿಂತಿರುಗಿ ತಮ್ಮ ಬೌಲಿಂಗ್ ಶೈಲಿಯನ್ನು ಸುಧಾರಿಸಿಕೊಂಡ ಬಳಿಕ ಐಸಿಸಿ ಬಯೋ ಮೆಕಾನಿಕಲ್ ಪರೀಕ್ಷೆ ಬಳಿಕ ಕ್ಲಿಯರ್ ಮಾಡಿತ್ತು. 

ಆದಾಗ್ಯೂ ಬಿಸಿಸಿಐ ಐಸಿಸಿ ವರದಿಯನ್ನು ಸ್ವೀಕರಿಸಲು ನಿರಾಕರಿಸಿದ್ದು, ಟ್ರಿನಿಡಾಡ್ ಆಫ್‌ಸ್ಪಿನ್ನರ್ ಇನ್ನೊಂದು ಸುತ್ತು ಪರೀಕ್ಷೆಗೆ ಒಳಗಾಗಬೇಕು ಎಂದು ತಿಳಿಸಿತ್ತು. 
 ಐಪಿಎಲ್‌ನ 8ನೇ ಆವೃತ್ತಿ ಇಲ್ಲಿ ಆರಂಭವಾಗಲಿದ್ದು, ನೈಟ್ ರೈಡರ್ಸ್ ಏಪ್ರಿಲ್ 8ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. 

ವೆಬ್ದುನಿಯಾವನ್ನು ಓದಿ