ಅಕ್ರಮ ಬೌಲಿಂಗ್ ಶೈಲಿ: ಸುನಿಲ್ ನಾರಾಯಣ್‌ಗೆ ಐಸಿಸಿ ನಿಷೇಧ

ಭಾನುವಾರ, 29 ನವೆಂಬರ್ 2015 (18:10 IST)
ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನಾರಾಯಣ್ ಅವರ ಬೌಲಿಂಗ್ ಶೈಲಿ ಕಾನೂನುಬಾಹಿರ ಎಂದು ಐಸಿಸಿ ಸ್ವತಂತ್ರ ತಪಾಸಣೆಯಲ್ಲಿ ದೃಢಪಟ್ಟಿದೆ. ಸುನಿಲ್ ಅವರನ್ನು ತಕ್ಷಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದೆ. 
 
 ನಾರಾಯಣ್ ಅವರ ಬೌಲಿಂಗ್ ಶೈಲಿಯನ್ನು ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ವರದಿ ಮಾಡಲಾಗಿತ್ತು. ಅಂತಿಮ ಎಚ್ಚರಿಕೆ ನೀಡಿದ ಬಳಿಕ ಬಿಸಿಸಿಐ ಅವರನ್ನು ಆರೋಪಮುಕ್ತಗೊಳಿಸಿತ್ತು. ಆದರೆ ಐಸಿಸಿ ಪರಿಶೀಲನೆಯಲ್ಲಿ ಅವರ ಎಸೆತಗಳ ಎಲ್ಲಾ ವಿಧಗಳು  15 ಡಿಗ್ರಿ ಮಟ್ಟವನ್ನು ಮೀರಿದ್ದು ಪತ್ತೆಯಾಗಿದೆ.  ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ  ಮೂರನೇ ಏಕದಿನ ಪಂದ್ಯದಲ್ಲಿ ನಾರಾಯಣ್ ಅಕ್ರಮ ಬೌಲಿಂಗ್ ಶೈಲಿ ಮತ್ತೆ ವರದಿಯಾಗಿತ್ತು. 
 
ಸುನಿಲ್ ನಾರಾಯಣ್ ತನ್ನ ಬೌಲಿಂಗ್ ಶೈಲಿಯನ್ನು ಬದಲಿಸಿಕೊಂಡು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.  ನಾರಾಯಣ್ ಅವರ ಬೌಲಿಂಗ್ ಶೈಲಿಯ ಪರೀಕ್ಷೆಯನ್ನು ಐಸಿಸಿಯ ಮಾನ್ಯತೆ ಪಡೆದ  ಲೋಗ್‌ಬರೋ ವಿವಿಯ ಪರೀಕ್ಷಾ ಕೇಂದ್ರದಲ್ಲಿ ನವೆಂಬರ್ 17ರಂದು ನಡೆಸಲಾಗಿತ್ತು. 
 

ವೆಬ್ದುನಿಯಾವನ್ನು ಓದಿ