ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಶಕ ಪೂರೈಸಿದ ಸುರೇಶ್ ರೈನಾ

ಗುರುವಾರ, 30 ಜುಲೈ 2015 (16:44 IST)
ಭಾರತದ ಬ್ಯಾಟ್ಸ್‌ಮನ್ ಸುರೇಶ್ ರೈನಾ3 ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಶಕವನ್ನು ಪೂರೈಸಿದ್ದು, ತಮ್ಮ ವೃತ್ತಿಜೀವನದ ಪ್ರಗತಿ ಕುರಿತು ಸಂತೋಷವನ್ನು ವ್ಯಕ್ತಪಡಿಸಿದರು. 2005ರ ಜುಲೈ 30ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶ್ರೀಲಂಕಾ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು.  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ವರ್ಷ ಪೂರೈಸಿದ ನನಗೆ ಇದು ಸಡಗರದ ಪ್ರಯಾಣವಾಗಿದೆ ಎಂದು ಸುರೇಶ್ ರೈನಾ ಹೇಳಿದರು.

ರೈನಾ ಚೊಚ್ಚಲ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಬಳಿಕ 218 ಏಕದಿನ ಪಂದ್ಯಗಳಲ್ಲಿ 5500 ರನ್ ಸ್ಕೋರ್‌ನಲ್ಲಿ ಐದು ಶತಕಗಳು ಮತ್ತು 35 ಅರ್ಧಶತಕಗಳನ್ನು ದಾಖಲಿಸುವ ಮೂಲಕ ಟಿ 20, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಏಕಮಾತ್ರ ಭಾರತೀಯ ಆಟಗಾರನೆನಿಸಿದರು.

 2011ನೇ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ರೈನಾ ಎರಡು ವಿಶ್ವಕಪ್‌ಗಳಲ್ಲಿ ಒಟ್ಟು 358 ರನ್ ಸ್ಕೋರ್  ಮಾಡಿದ್ದರು. ಅವುಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ. 2011ರಲ್ಲಿ ರೈನಾ ವೆಸ್ಟ್ ಇಂಡೀಸ್ ತಂಡದ ವಿರುದ್ಧ ತಂಡಕ್ಕೆ ನಾಯಕತ್ವ ವಹಿಸುವ ಅವಕಾಶ ಸಿಕ್ಕಿತು. ವೆಸ್ಟ್ ಇಂಡೀಸ್ ವಿರುದ್ಧ ಏಕದಿನದಲ್ಲಿ ತಂಡವು 3-2ರಲ್ಲಿ ಜಯಗಳಿಸಿತ್ತು. 

ವೆಬ್ದುನಿಯಾವನ್ನು ಓದಿ