ಕುಡ್ಲದ ಅಳಿಯ ಸೂರ್ಯಕುಮಾರ್ ಯಾದವ್ ಮಂಗಳೂರಿನಲ್ಲಿ

Krishnaveni K

ಮಂಗಳವಾರ, 9 ಜುಲೈ 2024 (11:59 IST)
Photo Credit: X
ಮಂಗಳೂರು: ಇತ್ತೀಚೆಗಷ್ಟೇ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ ಕ್ಯಾಚ್ ಪಡೆದು ಪಂದ್ಯವನ್ನೇ ಗೆಲ್ಲಿಸಿಕೊಟ್ಟ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಈಗ ಮಂಗಳೂರಿಗೆ ಬಂದಿದ್ದಾರೆ.

ಮಂಗಳೂರಿಗೂ ಸೂರ್ಯಕುಮಾರ್ ಯಾದವ್ ಗೂ ಮೊದಲಿನಿಂದಲೂ ನಂಟಿದೆ. ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಮಂಗಳೂರಿನವರು. ಆದರೆ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಈ ಹಿನ್ನಲೆಯಲ್ಲಿ ದೇವಿಶಾ ತಮ್ಮ ಪತಿ ಜೊತೆಗೆ ತವರಿಗೆ ಬಂದಿದ್ದಾರೆ.

ಪತಿ ಸೂರ್ಯ ಜೊತೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ಜೋಡಿ ಮೊನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿತ್ತು. ತಮ್ಮ ಜೀವನದ ವಿಶೇಷ ಕ್ಷಣವನ್ನು ಮಂಗಳೂರಿನಲ್ಲಿ ಆಚರಿಸಿಕೊಳ್ಳಲು ಬಂದಿದ್ದರು. ವಿಮಾನ ನಿಲ್ದಾಣದಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಮಂಗಳೂರಿನ ತಮ್ಮ ಅಜ್ಜಿ ತಾತನ ಮನೆಗೆ ಬಂದಿದ್ದಾರೆ. ಇಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ದೇವಿಶಾ ಕರಾವಳಿಯ ನಂಟು ಬಿಟ್ಟಿಲ್ಲ ಎನ್ನುವುದಕ್ಕೆ ಕೆಲವು ಸಮಯದ ಹಿಂದೆ ಕೆಎಲ್ ರಾಹುಲ್ ಜೊತೆಗೆ ನಡೆಸಿದ್ದ ತುಳು ಸಂಭಾಷಣೆಯೇ ಸಾಕ್ಷಿಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ