ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಆಡದ ಏಕೈಕ ಟೀಂ ಇಂಡಿಯಾ ಆಟಗಾರ

Krishnaveni K

ಬುಧವಾರ, 3 ಸೆಪ್ಟಂಬರ್ 2025 (08:39 IST)
ಮುಂಬೈ: ಏಷ್ಯಾ ಕಪ್ ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಆಡದ ಏಕೈಕ ಆಟಗಾರರಿದ್ದಾರೆ. ಅವರು ಯಾರು ಎಂದು ತಿಳಿಯಿರಿ.

ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವದ ಸೂರ್ಯಕುಮಾರ್ ಯಾದವ್ ಹೆಗಲಿಗೇರಿತ್ತು. ಇದಾದ ಬಳಿಕ ಯುವ ಕ್ರಿಕೆಟಿಗರೇ ಟಿ20 ಪಂದ್ಯಾವಳಿಗಳಲ್ಲಿ ಆಡುತ್ತಿದ್ದರು. ಆದರೆ ಈಗ ಏಷ್ಯಾ ಕಪ್ ಗೆ ಹಿರಿಯ ಆಟಗಾರ ಜಸ್ಪ್ರೀತ್ ಬುಮ್ರಾ ಕೂಡಾ ಆಯ್ಕೆಯಾಗಿದ್ದಾರೆ.

ಏಷ್ಯಾ ಕಪ್ ಗೆ ಆಯ್ಕೆಯಾಗಿರುವ ಜಸ್ಪ್ರೀತ್ ಬುಮ್ರಾ ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಆಡುತ್ತಿದ್ದಾರೆ. ಉಳಿದಂತೆ ಅಭಿಷೇಕ್ ಶರ್ಮಾರಿಂದ ಹಿಡಿದು ಅರ್ಷ್ ದೀಪ್ ಸಿಂಗ್ ವರೆಗೆ ಎಲ್ಲಾ ಆಟಗಾರರೂ ಸೂರ್ಯ ನಾಯಕತ್ವದಲ್ಲಿ ಆಡಿದ್ದಾರೆ.

ಇದುವರೆಗೆ ಯುವ ಆಟಗಾರರಿಗೇ ನಾಯಕತ್ವ ವಹಿಸಿದ್ದ ಸೂರ್ಯಗೆ ಈ ಏಷ್ಯಾ ಕಪ್ ನಲ್ಲಿ ಅನುಭವಿ ಜಸ್ಪ್ರೀತ್ ಬುಮ್ರಾ ಸಾಥ್ ನೀಡಲಿದ್ದಾರೆ. ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಬುಮ್ರಾ, ಅರ್ಷ್ ದೀಪ್ ಸಿಂಗ್, ಅಕ್ಸರ್ ಪಟೇಲ್ ಸೇರಿದಂತೆ ಟೀಂ ಇಂಡಿಯಾ ಬಲಿಷ್ಠ ತಂಡವಾಗಿದ್ದು ಏಷ್ಯಾ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ