ಟಿ20 ವಿಶ್ವಕಪ್: ಮೊದಲ ಪಂದ್ಯದಲ್ಲೇ ಹೀನಾಯ ಸೋಲುಂಡ ಅತಿಥೇಯ ಆಸೀಸ್
ಶನಿವಾರ, 22 ಅಕ್ಟೋಬರ್ 2022 (16:50 IST)
ಸಿಡ್ನಿ: ಟಿ20 ವಿಶ್ವಕಪ್ ಕೂಟದ ಮೊದಲ ಪಂದ್ಯದಲ್ಲಿಯೇ ಅತಿಥೇಯ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ 89 ರನ್ ಗಳ ಹೀನಾಯ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಈ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದ ಕಾನ್ವೇ ಅವರ 58 ಎಸೆತಗಳ 92 ರನ್. ಅವರಿಗೆ ತಕ್ಕ ಸಾಥ್ ನೀಡಿದ ಫಿನ್ ಅಲೆನ್ 42, ನೀಶಾಮ್ ಬಿರುಸಿ 26 ರನ್ ಗಳಿಸಿದರು.
ಈ ಬೃಹತ್ ಮೊತ್ತ ಬೆನ್ನತ್ತಿದ ಆಸೀಸ್ ಬ್ಯಾಟಿಗರ ವೈಫಲ್ಯದಿಂದಾಗಿ 17.1 ಓವರ್ ಗಳಲ್ಲಿಯೇ 111 ರನ್ ಗಳಿಗೆ ಆಲೌಟ್ ಆಯಿತು. ಗ್ಲೆನ್ ಮ್ಯಾಕ್ಸ್ ವೆಲ್ 28 ಪ್ಯಾಟ್ ಕ್ಯುಮಿನ್ಸ್ 21, ಮಿಚೆಲ್ ಮಾರ್ಷ್ 16 ರನ್ ಗಳ ಕೊಡುಗೆ ನೀಡಿದರು. ಡೇವಿಡ್ ವಾರ್ನರ್ ಕೇವಲ 5, ಏರಾನ್ ಫಿಂಚ್ 13 ರನ್ ಗಳಿಸಿ ಔಟಾಗಿದ್ದರಿಂದ ತಂಡ ಸಂಕಷ್ಟಕ್ಕೀಡಾಯಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 2, ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನೆರ್ ತಲಾ 3 ವಿಕೆಟ್ ಕಬಳಿಸಿದರು.