20 ವಿಕೆಟ್ ಭಾರತಕ್ಕೆ ನಿರ್ಣಾಯಕ, ಭುವನೇಶ್ವರ್‌‌ರನ್ನು ಆಡಿಸಿ: ಗವಾಸ್ಕರ್

ಗುರುವಾರ, 27 ಆಗಸ್ಟ್ 2015 (20:45 IST)
1993ರಿಂದೀಚೆಗೆ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲದ ಭಾರತಕ್ಕೆ ಇದು ಬಹುಶಃ ಉತ್ತಮ ಅವಕಾಶವಾಗಿದೆ. ಸಂಗಕ್ಕರ ಅನುಪಸ್ಥಿತಿಯಲ್ಲಿ  ಶ್ರೀಲಂಕಾ ಡ್ರೆಸಿಂಗ್ ರೂಂನಲ್ಲಿ ಅನುಭವದ ಕೊರತೆಯಿದ್ದು, ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಇದು ಆತಿಥೇಯರಿಗೆ ಸಮಸ್ಯೆ ಉಂಟುಮಾಡುತ್ತದೆ ಎಂದು ಸುನಿಲ್ ಗವಾಸ್ಕರ್ ವಿಶ್ಲೇಷಿಸಿದ್ದಾರೆ. 
 
ಸಂಗಕ್ಕರ ಅನುಭವದ ಬ್ಯಾಟಿಂಗ್ ಮಿಸ್ ಆಗುವುದರಿಂದ ಲಂಕನ್ನರಿಗೆ ನಕಾರಾತ್ಮಕವಾಗಿದೆ. ಭಾರತಕ್ಕೆ ಗಾಯಗೊಂಡ ಮುರಳಿ ವಿಜಯ್ ಮತ್ತು ಸಹಾ ಆಡದಿದ್ದರೂ ಎಲ್ಲಾ ಅನುಕೂಲಗಳಿವೆ ಎಂದು ಗವಾಸ್ಕರ್ ಹೇಳಿದರು. 
 
ಪ್ರವಾಸಿಗಳು ಐವರು ಸ್ಪೆಷಲಿಸ್ಟ್ ಬೌಲರುಗಳನ್ನು ಆಡಿಸುವ ಸನ್ನಿವೇಶವಿದ್ದು, ಭಾರತ ಗೆಲುವಿಗೆ 20 ವಿಕೆಟ್ ಕಬಳಿಸಬೇಕು ಎಂದು ಗವಾಸ್ಕರ್ ಸಲಹೆ ಮಾಡಿದರು. 
ಭುವನೇಶ್ವರ್ ಕುಮಾರ್ ಅವರನ್ನು ಆಡಿಸಬೇಕು. ಭಾರತವು ನೈಜ ಸ್ವಿಂಗ್ ಬೌಲರ್‌ಗೆ ಅವಕಾಶ ನೀಡಬೇಕು ಎಂದು ಗವಾಸ್ಕರ್ ಹೇಳಿದರು.

ರಂಗನಾಥ್ ಹೆರಾತ್ ಗಾಲೆಯಲ್ಲಿ ಟೀಂ ಇಂಡಿಯಾವನ್ನು ವಔಟ್ ಮಾಡಿದ್ದರೂ ಭಾರತದ ಸ್ಪಿನ್ನರ್‌ಗಳು ಉತ್ತಮ ಬೌಲಿಂಗ್ ಮಾಡುತ್ತಾರೆ ಎಂದು ಗವಾಸ್ಕರ್ ನಮ್ಮ ಸ್ಪಿನ್ ಬೌಲಿಂಗ್‌ ಶ್ಲಾಘಿಸಿದರು.  ಸಿಂಹಳ ಕ್ರಿಕೆಟ್ ಕ್ಲಬ್ ವಿಕೆಟ್ ಹುಲ್ಲಿನ ಹೊದಿಕೆಯಿದ್ದು ವರುಣ್ ಆರಾನ್ ಪೇಸ್‌ಗಿಂತ ಭುವನೇಶ್ವರ್ ಸ್ವಿಂಗ್ ಹೆಚ್ಚು ಮಾರಕವಾಗಿದೆ ಎಂದು ನುಡಿದರು. 

ವೆಬ್ದುನಿಯಾವನ್ನು ಓದಿ