ತಮಿಳುನಾಡಿನ ಈ ಬಾಲಕಿ 13 ರನ್ ಕೊಟ್ಟು 6 ವಿಕೆಟ್ ಕಿತ್ತಳು!
ದ. ವಲಯದ ಪರ ಅರುಣ್ ಆಡುತ್ತಿದ್ದಾಳೆ. ಆಕೆಯ ಈ ಸಾಧನೆಯಿಂದಾಗಿ ತಮಿಳುನಾಡು ಗೋವಾ ವಿರುದ್ಧ ಎಂಟು ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಈ ಪಂದ್ಯ ಆಂಧ್ರ ಪ್ರದೇಶದ ವಿಳಿಯಾನಗರಂ ಮೈದಾನದಲ್ಲಿ ನಡೆಯಿತು.
ಈ ಮೈದಾನದಲ್ಲಿ ರಣಜಿ ಪಂದ್ಯಗಳು ನಡೆಯುತ್ತವೆ. ಬಾಲಕಿಯ ಸಾಧನೆಗೆ ಕ್ರಿಕೆಟ್ ವಲಯ ನಿಬ್ಬೆರಗಾಗಿದೆ. ಆಕೆ ಕೇವಲ ಬೌಲರ್ ಮಾತ್ರವಲ್ಲ, ಉತ್ತಮ ಬ್ಯಾಟ್ಸ್ ಮನ್ ಕೂಡಾ. ಆಕೆಯ ಸಾಧನೆಯಿಂದ ತುಂಬಾ ಖುಷಿಯಾಗಿರುವುದಾಗಿ ಕೋಚ್ ಗಳು ಹೇಳಿದ್ದಾರೆ.