TATA IPL 2025: PBKS vs DC ಪಂದ್ಯಾಟಕ್ಕೆ ಅಡ್ಡಿಯಾದ ಮಳೆ, ಟಾಸ್ ವಿಳಂಬ

Sampriya

ಗುರುವಾರ, 8 ಮೇ 2025 (20:12 IST)
Photo Credit X
ಹಿಮಾಚಲ ಪ್ರದೇಶ: ಧರ್ಮಶಾಲಾದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಾಟಕ್ಕೆ ಮಳೆ ಅಡ್ಡಿಯಾಗಿದೆ. 7ಗಂಟೆಗೆ ನಡೆಯಬೇಕಿದ್ದ ಟಾಸ್‌ ಇದೀಗ ಮಳೆಯಿಂದಾಗಿ ವಿಳಂಭವಾಗಿದೆ.

ಸದ್ಯಕ್ಕೆ ಪಂದ್ಯವನ್ನು ನಿಲ್ಲಿಸಲಾಗಿದ್ದು, ಶೀಘ್ರದಲ್ಲೇ ಟಾಸ್ ನಡೆಯಲಿದೆ. ಮೈದಾನದ ಸಿಬ್ಬಂದಿ ಕಾರ್ಯಾಚರಣೆಯಲ್ಲಿರುವಾಗ ಆಟಗಾರರು ಪಂದ್ಯಾಟಕ್ಕೆ ರೆಡಿಯಾಗುತ್ತಿದ್ದಾರೆ. ಸ್ಥಳವನ್ನು ಪಂದ್ಯಕ್ಕೆ ಸಿದ್ಧಗೊಳಿಸಿದ್ದಾರೆ.

PBKS ಪ್ಲೇಆಫ್‌ಗೆ ಪ್ರವೇಶಿಸುವ ಅಂಚಿನಲ್ಲಿದ್ದು,  DC ಈ ಗೆಲುವಿನ ಮೂಲಕ ಮತ್ತೇ ಪ್ಲೇ ಆಫ್‌ಗೆ ಹತ್ತಿರವಾಗುವ ಪ್ರಯತ್ನದಲ್ಲಿದ್ದಾರೆ.

ಇದುವರೆಗೆ ನಡೆದ 11 ಪಂದ್ಯಾಟದಲ್ಲಿ ಡಿಸಿ 6ರಲ್ಲಿ ಗೆಲುವು ಸಾಧಿಸಿ, 4ರಲ್ಲಿ ಸೋತಿದೆ. ಇದರಿಂದ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ.

ಪಂಜಾಬ್‌ ಕಿಂಗ್ಸ್‌ ಇದುವರೆಗೆ ಎದುರಿಸಿದ 11 ಪಂದ್ಯಾಟದಲ್ಲಿ 7ರಲ್ಲಿ ಗೆಲುವು ಸಾಧಿಸಿ 3ರಲ್ಲಿ ಸೋತಿದೆ. ಇದರಿಂದ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯಾಟ ಎರಡು ತಂಡಗಳಿಗೂ ತುಂಬಾನೇ ಮುಖ್ಯವಾಗಿದ್ದು, ಇದೀಗ ಮಳೆಯಿಂದಾಗಿ ಪಂದ್ಯಾಟಕ್ಕೆ ತಡೆಯಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಕೆಲವು ಆಟಗಾರರು ಮತ್ತೆ ಡ್ರೆಸ್ಸಿಂಗ್ ರೂಮ್‌ಗೆ ಮರಳಿದ್ದಾರೆ. ಮಳೆಯಿಂದಾಗಿ ಪಂದ್ಯಾಟಕ್ಕೆ ಸಿದ್ದ ಮಾಡಿದ್ದ ಕೆಲ ವಸ್ತುಗಳು ಹಾಳಾಗುತ್ತಿದೆ.

ಸಿಕ್ಕಿರುವ ಮಾಹಿತಿ ಪ್ರಕಾರ ಮಳೆ ನಿಂತ ನಿಮಿಷಗಳಲ್ಲೇ ತಪಾಸಣೆಯ ಬಳಿಕ ಟಾಸ್ ನಡೆದು, ಪಂದ್ಯಾಟ ಆರಂಭಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ