Vignesh Puthur, ಮುಂಬೈ ತಂಡಕ್ಕೆ ಆಘಾತ; ಉದಯೋನ್ಮುಖ ಸ್ಪಿನ್ನರ್‌ ವಿಘ್ನೇಶ್‌ ಪುತ್ತೂರು ಟೂರ್ನಿಯಿಂದ ಔಟ್‌

Sampriya

ಗುರುವಾರ, 1 ಮೇ 2025 (18:48 IST)
Photo Credit X
ಮುಂಬೈ: ಮುಂಬೈ ಇಂಡಿಯನ್ಸ್‌ ಪರ ಈ ಬಾರಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಎಡಗೈ ಸ್ಪಿನ್ನರ್‌ ವಿಘ್ನೇಶ್‌ ಪುತ್ತೂರ್‌ (24), ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಂದ ಹೊರಬಿದ್ದಿದ್ದಾರೆ. ಹೀಗಾಗಿ ತಂಡಕ್ಕೆ ಆಘಾತವಾಗಿದೆ.

ಮೊಣಕಾಲಿನ ನೋವಿನಿಂದ ಬಳಲುತ್ತಿರುವ ಅವರ ಬದಲು ಲೆಗ್‌ಸ್ಪಿನ್ನರ್‌ ರಘು ಶರ್ಮಾಗೆ (31) ಅವಕಾಶ ನೀಡಲಾಗಿದೆ. ಐಪಿಎಲ್‌ ಟೂರ್ನಿಯ ಪ್ಲೇ ಆಫ್‌ ಹಂತಕ್ಕೇರಲು ಎಂಟು ತಂಡಗಳು ಭಾರೀ ಪೈಪೋಟಿ ನಡೆಸುತ್ತಿವೆ. ಪ್ರಮುಖ ಸ್ಪಿನ್ನರ್ ತಂಡದಿಂದ ಹೊರಬಿದ್ದಿದ್ದಾರೆ.

ಕೇರಳ ಮೂಲಕ ವಿಘ್ನೇಶ್‌ ಪುತ್ತೂರು ತಾವಾಡಿದ ಮೊದಲ ಪಂದ್ಯದಲ್ಲೇ (32 ರನ್‌ಗೆ 3 ವಿಕೆಟ್‌) ಮಿಂಚಿದ್ದರು. ಟೂರ್ನಿಯಲ್ಲಿ ಒಟ್ಟು 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದೀಗ ಅವರ ಬದಲು ಸ್ಥಾನ ಗಿಟ್ಟಿಸಿಕೊಂಡಿರುವ ರಘು ಶರ್ಮಾ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಪಂಜಾಬ್‌ ಮತ್ತು ಪುದುಚೇರಿ ಪರ ಆಡಿರುವ 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇನಿಂಗ್ಸ್‌ವೊಂದರಲ್ಲಿ 56 ರನ್‌ ನೀಡಿ 7 ವಿಕೆಟ್‌ ಪಡೆದಿರುವುದು ಅತ್ಯುತ್ತಮ ಸಾಧನೆಯಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ