ಮುಂಬೈ ಟೆಸ್ಟ್: ಬೃಹತ್ ಮೊತ್ತ ಪೇರಿಸಿದ ಟೀಂ ಇಂಡಿಯಾ
ಮೊದಲ ಇನಿಂಗ್ಸ್ ನಲ್ಲಿ ಭಾರತ 325 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಕೇವಲ 62 ರನ್ ಗಳಿಗೆ ಆಲೌಟ್ ಆಗಿತ್ತು. ಅದಾದ ಬಳಿಕ ಫಾಲೋ ಆನ್ ಹೇರದೇ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿತು. ಇತ್ತೀಚೆಗಿನ ವರದಿ ಬಂದಾಗ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿದೆ.
ಭಾರತದ ಪರ ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಮಯಾಂಕ್ ದ್ವಿತೀಯ ಇನಿಂಗ್ಸ್ ನಲ್ಲಿ ಅರ್ಧಶತಕ (62) ಸಿಡಿಸಿದರು. ಉತ್ತಮ ಸಾಥ್ ನೀಡಿದ ಪೂಜಾರ 47 ರನ್ ಗಳಿಸಿದರೆ ಶುಬ್ನಂ ಗಿಲ್ ಕೂಡಾ 47 ರನ್ ಗಳ ಕಾಣಿಕೆ ನೀಡಿದರು. ನಾಯಕ ಕೊಹ್ಲಿ ಇನಿಂಗ್ಸ್ 36 ರನ್ ಗಳಿಗೆ ಸಮಾಪ್ತಿಯಾಯಿತು. ಶ್ರೇಯಸ್ ಐಯರ್ ಕೇವಲ 14 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಇದೀಗ ಬಿರುಸಿನ ಬ್ಯಾಟಿಂಗ್ ನಡೆಸುತ್ತಿರುವ ಅಕ್ಸರ್ ಪಟೇಲ್ 40 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.