10 ವಿಕೆಟ್ ಸಾಧನೆಯನ್ನು ಎರಡು ಬಾರಿ ಕಣ್ಣಾರೆ ಕಂಡ ರಾಹುಲ್ ದ್ರಾವಿಡ್
ಯಾಕೆಂದರೆ ಈ ಹಿಂದೆ ಈ ಸಾಧನೆ ಮಾಡಿದ್ದು ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ. ಪಾಕಿಸ್ತಾನ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕುಂಬ್ಳೆ ಈ ಸಾಧನೆ ಮಾಡಿದ್ದರು.
ಆ ಸಂದರ್ಭದಲ್ಲಿಯೂ ದ್ರಾವಿಡ್ ಆಟಗಾರನಾಗಿ ಕುಂಬ್ಳೆ ಜೊತೆಯಲ್ಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಇದೀಗ ಎದುರಾಳಿ ತಂಡದ ಬೌಲರ್ 10 ವಿಕೆಟ್ ಪಡೆಯುವ ವೇಳೆಯೂ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಪ್ರತ್ಯಕ್ಷದರ್ಶಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೇವಲ ಮೂರು ಬಾರಿ ಮಾತ್ರ 10 ವಿಕೆಟ್ ಸಾಧನೆಯಾಗಿದೆ. ಈ ಪೈಕಿ ಎರಡೂ ಬಾರಿಯೂ ದ್ರಾವಿಡ್ ಇದಕ್ಕೆ ಸಾಕ್ಷಿಯಾಗಿದ್ದು ವಿಶೇಷ.