ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಹೆಚ್ಚು ಅರ್ಧಶತಕ ಹೊಡೆದು ದಾಖಲೆ ಮಾಡಿದ ಟೀಂ ಇಂಡಿಯಾ

ಸೋಮವಾರ, 28 ನವೆಂಬರ್ 2016 (14:02 IST)
ಮೊಹಾಲಿ: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಹೊಸದೊಂದು ದಾಖಲೆ ಮಾಡಿದೆ. ಏಳು ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಮೂವರು ಬ್ಯಾಟ್ಸ್ ಮನ್ ಗಳು ಅರ್ಧಶತಕ ದಾಖಲಿಸಿದ್ದುಇದೇ ಮೊದಲಾಗಿದೆ.

ಹಾಗೆ ನೋಡಿದರೆ ಆರಂಭಿಕರೇ ಟೀಂ ಇಂಡಿಯಾಕ್ಕೆ ಈ ಸರಣಿಯಲ್ಲಿ ಕೈಕೊಡುತ್ತಿರುವುದು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಸತತವಾಗಿ ರನ್ ಗಳಿಸುತ್ತಲೇ ಇದ್ದಾರೆ.  ಇಂದು ಕೂಡಾ ಅದೇ ಆಗಿದೆ. ಏಳನೇ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಎಂಟನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ 90 ರನ್ ಹಾಗೂ ಒಂಭತ್ತನೇ ಬ್ಯಾಟ್ಸ್ ಮನ್ ಜಯಂತ್ ಯಾದವ್ 55ರನ್ ಗಳಿಸಿ ಈ ಸಾಧನೆ ಮಾಡಿದರು.

ಇದರಿಂದಾಗಿ ಭಾರತ ಟೀ ವಿರಾಮದ ವೇಳೆಗೆ 417 ಕ್ಕೆ ಆಲೌಟ್ ಆಗಿದ್ದು, ಒಟ್ಟಾರೆ 134 ರನ್ ಗಳ ಉಪಯುಕ್ತ ಮುನ್ನಡೆ ಸಾಧಿಸಿದೆ. ಕಳೆದ ಪಂದ್ಯದಲ್ಲೂ ಭಾರತ 100 ರನ್ ಮುನ್ನಡೆ ಗಳಿಸಿದ ಕಾರಣ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಈ ಪಂದ್ಯದಲ್ಲೂ ಅದೇ ಪುನರಾವರ್ತನೆಯಾಗುತ್ತದೋ ಎಂದು ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮೇಲೆ ಗೊತ್ತಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ