ಮತ್ತೊಮ್ಮೆ ಬ್ಯಾಟಿಗರ ಪರದಾಟ, ಲೋ ಸ್ಕೋರ್ ಮ್ಯಾಚ್

ಬುಧವಾರ, 12 ಜನವರಿ 2022 (08:50 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 223 ಕ್ಕೆ ಆಲೌಟ್ ಆಗಿದೆ. ಇತ್ತ ಮೊದಲ ಇನಿಂಗ್ಸ್ ಆರಂಭಿಸಿದ್ದ ಆಫ್ರಿಕಾ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದೆ.

ಈ ಪಂದ್ಯದಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ ಕಳಪೆ ಮೊತ್ತಕ್ಕೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಬಿಟ್ಟರೆ ಉಳಿದವರು ಯಾರೂ ನಿಂತು ಆಡುವ ಛಾತಿಯೇ ತೋರಲಿಲ್ಲ. ಕೊಹ್ಲಿ 79 ರನ್ ಗಳ ಕೊಡುಗೆ ನೀಡಿದರೆ ಪೂಜಾರ 43 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ರಿಷಬ್ ಪಂತ್ ಉತ್ತಮವಾಗಿ ಆರಂಭಿಸಿದರೂ 27 ರನ್ ಗೆ ವಿಕೆಟ್ ಒಪ್ಪಿಸಿದರು. ಆಫ್ರಿಕಾ ಪರ ಮಾರಕ ದಾಳಿ ಸಂಘಟಿಸಿದ ಕಗಿಸೊ ರಬಾಡ 4, ಮಾರ್ಕೋ ಜೇನ್ಸನ್ 3 ವಿಕೆಟ್ ಮತ್ತು ನಿಗಿಡಿ 1 ವಿಕೆಟ್ ಕಬಳಿಸಿದರು.

ಅತ್ತ ಇನಿಂಗ್ಸ್ ಆರಂಭಿಸಿದ ಆಫ್ರಿಕಾ ಕತೆಯೂ ಇದೇ ಆಗಿತ್ತು. ಆರಂಭದಲ್ಲೇ ದ್ವಿತೀಯ ಪಂದ್ಯದ ಹೀರೋ ಡೀನ್ ಎಲ್ಗರ್ ವಿಕೆಟ್ ನ್ನು ಜಸ್ಪ್ರೀತ್ ಬುಮ್ರಾ ಪಡೆದುಕೊಂಡರು. ಅವರು 3 ರನ್ ಗೆ ಔಟಾದರು. ಇದೀಗ ಭಾರತೀಯ ಮೂಲದ ಕೇಶವ್ ಮಹಾರಾಜ್ 6 ಹಾಗೂ ಆಡನ್ ಮಾರ್ಕರನ್ 8 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ