ಟೀಂ ಇಂಡಿಯಾದಲ್ಲಿ ಕೊರೋನಾ: ಅಂತಿಮ ಟೆಸ್ಟ್ ನಡೆಯುವುದೇ ಅನುಮಾನ?!

ಗುರುವಾರ, 9 ಸೆಪ್ಟಂಬರ್ 2021 (17:05 IST)
ಮ್ಯಾಂಚೆಸ್ಟರ್: ಟೀಂ ಇಂಡಿಯಾ ಫಿಸಿಯೋ ಯೋಗೇಶ್ ಪರ್ಮಾರ್ ಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅಂತಿಮ ಟೆಸ್ಟ್ ಪಂದ್ಯ ನಡೆಯುವುದೇ ಅನುಮಾನವಾಗಿದೆ.


ಈಗಾಗಲೇ ಹೆಡ್ ಕೋಚ್ ರವಿಶಾಸ್ತ್ರಿ, ಭರತ್ ಅರುಣ್, ಆರ್. ಶ್ರೀಧರ್ ಗೆ ಕೊರೋನಾ ಧೃಢಪಟ್ಟಿತ್ತು. ಹೀಗಾಗಿ ಇವರೆಲ್ಲಾ ಲಂಡನ್ ನಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇದೀಗ ಫಿಸಿಯೋ ಯೋಗೇಶ್ ಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಇದರಿಂದಾಗಿ ಇಂದು ನಡೆಯಬೇಕಿದ್ದ ಟ್ರೈನಿಂಗ್ ಸೆಷನ್ ಕೂಡಾ ರದ್ದಾಗಿದೆ. ಇದೀಗ ಅಂತಿಮ ಟೆಸ್ಟ್ ನಡೆಯುವುದೇ ಅನುಮಾನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ