ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಹೀಗಿರುತ್ತೆ
ಭಾನುವಾರ, 27 ಜೂನ್ 2021 (12:13 IST)
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಮೂಲಗಳ ಪ್ರಕಾರ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಭಾರೀ ಬದಲಾವಣೆ ಮಾಡಲಿದೆ. ಫಾರ್ಮ್ ನಲ್ಲಿಲ್ಲದ ಚೇತೇಶ್ವರ ಪೂಜಾರಗೆ ವಿಶ್ರಾಂತಿ ನೀಡಿ ನಾಯಕ ಕೊಹ್ಲಿಯೇ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಡ್ತಿ ಪಡೆಯಬಹುದು ಎನ್ನಲಾಗಿದೆ.
ಇನ್ನು, ಪೂಜಾರ ಬದಲಿಗೆ ಕೆಎಲ್ ರಾಹುಲ್ ಅಥವಾ ಹನುಮ ವಿಹಾರಿಗೆ ಸ್ಥಾನ ಸಿಗಬಹುದು. ಸದ್ಯಕ್ಕೆ ಉಪ ನಾಯಕ ಅಜಿಂಕ್ಯಾ ರೆಹಾನೆ ಸ್ಥಾನ ಉಳಿಸಿಕೊಳ್ಳಬಹುದು. ಆದರೆ ಅವರೂ ವಿಫಲವಾದರೆ ಮುಂದೆ ಸ್ಥಾನ ಕಳೆದುಕೊಳ್ಳಬೇಕಾಗಬಹುದು.