ಕುಸ್ತಿಪಟು ಸುಶೀಲ್ ಕುಮಾರ್ ತಿಹಾರ್ ಜೈಲ್ ಗೆ ಶಿಫ್ಟ್

ಶನಿವಾರ, 26 ಜೂನ್ 2021 (12:48 IST)
ನವದೆಹಲಿ: ಯುವ ಕುಸ್ತಿಪಟು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ರನ್ನು ಇದೀಗ ತಿಹಾರ್ ಜೈಲ್ ಗೆ ಶಿಫ್ಟ್ ಮಾಡಲಾಗಿದೆ.


ಮಂಡೋಲಿ ಜೈಲ್ ನಲ್ಲಿದ್ದ ಸುಶೀಲ್ ಕುಮಾರ್ ಗೆ ಜೈಲ್ ನಲ್ಲಿದ್ದಾಗ ಜೀವ ಬೆದರಿಕೆ ಬಂದ ಹಿನ್ನಲೆಯಲ್ಲಿ ಅವರನ್ನು ಸುರಕ್ಷತಾ ಕಾರಣಗಳಿಂದ ತಿಹಾರ್ ಜೈಲ್ ಗೆ ಶಿಫ್ಟ್ ಮಾಡಲಾಗಿದೆ.

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಸುಶೀಲ್ ಕುಮಾರ್ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು. ಮೇ 23 ರಂದು ಸುಶೀಲ್ ಮತ್ತು ಅವರ ಸಹಚರ ಅಜಯ್ ರನ್ನು ಪೊಲೀಸರು ಬಂಧಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ