ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಫಿಟ್ನೆಸ್, ತಾಳ್ಮೆಗೆ ಮೆಚ್ಚಲೇಬೇಕು.
ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿರುವ ಟೀಂ ಇಂಡಿಯಾ ದಿನವಿಡೀ ಪರ್ತ್ ನ ಉರಿಬಿಸಿಲಿನಲ್ಲಿ ನಿರಂತರವಾಗಿ ಬೌಲಿಂಗ್ ಮಾಡಿತು. ವಿಪರೀತ ಬಿಸಿಲು, ವೇಗದ ಪಿಚ್ ನಲ್ಲಿ ಆಸ್ಟ್ರೇಲಿಯನ್ನರನ್ನು ಕಟ್ಟಿ ಹಾಕುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. ಆದರೂ ಅದನ್ನು ತಾಳ್ಮೆಯಿಂದಲೇ ನಿಭಾಯಿಸಿದ್ದಕ್ಕೆ ಮೆಚ್ಚಲೇಬೇಕು.
ಮೊದಲ ದಿನದಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಇಶಾಂತ್ ಶರ್ಮಾ ಮತ್ತು ಹನುಮ ವಿಹಾರಿ ತಲಾ 2 ವಿಕೆಟ್ ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು. ಆಸ್ಟ್ರೇಲಿಯಾ ಪರ ಆರಂಭಿಕ ಮಾರ್ಕಸ್ ಹ್ಯಾರಿಸ್ 70 ರನ್ ಗಳಿಸಿ ಔಟಾದರೆ, ಟ್ರಾವಿಸ್ ಹೆಡ್ 58 ರನ್ ಗಳಿಸಿದರು. ಇದೀಗ 16 ರನ್ ಗಳಿಸಿರುವ ನಾಯಕ ಟಿಮ್ ಪೇಯ್ನ್ ಮತ್ತು 11 ರನ್ ಗಳಿಸಿರುವ ಪ್ಯಾಟ್ ಕ್ಯುಮಿನ್ಸ್ ಕ್ರೀಸ್ ನಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ