ಆಗಸ್ಟ್ 15 ರಂದು ಟೀಂ ಇಂಡಿಯಾ ಕೋಚ್ ಆಯ್ಕೆ

ಭಾನುವಾರ, 11 ಆಗಸ್ಟ್ 2019 (09:00 IST)
ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಮಾಡಲು ಕಪಿಲ್ ದೇವ್ ನೇತೃತ್ವದ ಸಮಿತಿ ಆಗಸ್ಟ್ 15 ರಂದು ಸಂದರ್ಶನ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ.


ಮುಖ್ಯ ಕೋಚ್, ಬೌಲಿಂಗ್, ಬ್ಯಾಟಿಂಗ್ ಕೋಚ್ ಗಳ ಆಯ್ಕೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಕಪಿಲ್ ದೇವ್ ನೇತೃತ್ವದ ಮೂವರು ಸದಸ್ಯರ ಸಮಿತಿ ಕೋಚ್ ಆಯ್ಕೆ ಮಾಡಲಿದೆ.

ಇದಕ್ಕೂ ಮೊದಲು ಆಗಸ್ಟ್ 13 ಮತ್ತು 14 ರಂದೇ ಕೋಚ್ ಆಯ್ಕೆ ನಡೆಸಲು ಸಮಿತಿ ಉದ್ದೇಶಿಸಿತ್ತು. ಆದರೆ ಅಂತಿಮ ಪಟ್ಟಿ ತಯಾರಿಸಲು ಕೊಂಚ ವಿಳಂಬವಾಗಿರುವುದರಿಂದ ಒಂದು ದಿನ ಮುಂದೂಡಲಾಗಿದೆ. ಸಂದರ್ಶನ ಆಗಸ್ಟ್ 15 ರಂದು ನಡೆಯಲಿದ್ದು, ಅದೇ ದಿನ ಅಥವಾ ಮರುದಿನ ಕೋಚ್ ಯಾರೆಂಬ ವಿಚಾರ ಬಹಿರಂಗವಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ