ಆರಂಭಿಕರು ಮಾಡಿದ ತಪ್ಪಿಗೆ ವಿರಾಟ್ ಕೊಹ್ಲಿ ಬೆಲೆ ತೆರಬೇಕಾಗಿದೆ!

ಗುರುವಾರ, 2 ಆಗಸ್ಟ್ 2018 (17:35 IST)
ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭದ ಹೊರತಾಗಿಯೂ ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿದೆ.
 

ಭಾರತದ ಆರಂಭ ನೋಡಿದರೆ ಇಂಗ್ಲೆಂಡ್ ಗೆ ದಿಟ್ಟ ಉತ್ತರ ಗ್ಯಾರಂಟಿ ಎನ್ನುವ ಹಾಗಿತ್ತು. ಶಿಖರ್ ಧವನ್ ಕೂಡಾ ಉತ್ತಮವಾಗಿಯೇ ಆಡುತ್ತಿದ್ದರು. ಆದರೆ ಇನ್ನೇನು ಲಯಕ್ಕೆ ಬರುತ್ತಿದ್ದಾರೆ ಎನ್ನುವಾಗ ವಿಕೆಟ್ ಕಳೆದುಕೊಂಡರು.

ಮುರಳಿ ವಿಜಯ್ 20 ರನ್ ಗಳಿಸಿದರೆ ಧವನ್ 26 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆಎಲ್ ರಾಹುಲ್ ಇಂದು ಯಾವುದೇ ಮೋಡಿ ಮಾಡಿಲ್ಲ. ಕೇವಲ 4 ರನ್ ಗಳಿಗೆ ಔಟಾಗಿ ಪೆವಿಲಿಯನ್ ಸೇರಿಕೊಂಡರು.

ಹೀಗಾಗಿ ಇನಿಂಗ್ಸ್ ಮುನ್ನಡೆಸುವ ಜವಾಬ್ಧಾರಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರೆಹಾನೆ ಮೇಲೆ ಬಿತ್ತು. ಊಟದ ವಿರಾಮದ ವೇಳೆಗೆ 9 ರನ್ ಗಳಿಸಿರುವ ಕೊಹ್ಲಿ ಮತ್ತು 8 ರನ್ ಗಳಿಸಿರುವ ರೆಹಾನೆ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ