ಮತ್ತೊಂದು ನಿಧಾನಗತಿಯ ರನ್ ಗುಡ್ಡೆ ಹಾಕುತ್ತಿರುವ ಟೀಂ ಇಂಡಿಯಾ

ಭಾನುವಾರ, 26 ಮಾರ್ಚ್ 2017 (11:46 IST)
ಧರ್ಮಶಾಲಾ: ತೃತೀಯ ಟೆಸ್ಟ್ ಪಂದ್ಯದಲ್ಲಿ ಆಡಿದಂತೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ನಿಧಾನಗತಿಯ ಇನಿಂಗ್ಸ್ ಕಟ್ಟಲು ಭಾರತ ಆರಂಭಿಸಿದೆ. ಎರಡನೇ ದಿನವಾದ ಇಂದು ಊಟದ ವಿರಾಮಕ್ಕೆ 1 ವಿಕೆಟ್ ಕಳೆದುಕೊಂಡು64  ರನ್ ಗಳಿಸಿದೆ.

 

ಕನ್ನಡಿಗ ಕೆಎಲ್ ರಾಹುಲ್ ಮತ್ತೊಂದು ಅದ್ಭುತ ಇನಿಂಗ್ಸ್ ಗೆ ಮುನ್ನುಡಿ ಬರೆಯುತ್ತಿದ್ದಾರೆ.  75 ಎಸೆತ ಎದುರಿಸಿದ ಅವರು 5 ಮನಮೋಹಕ ಬೌಂಡರಿಗಳ ಸಹಾಯದಿಂದ 31 ರನ್ ಗಳಿಸಿ ಆಡುತ್ತಿದ್ದಾರೆ. ಇಂದಾದರೂ, ಅವರ ಇನಿಂಗ್ಸ್ ಮೂರಂಕಿ ದಾಟಲಿ ಎಂಬುದು ಅಭಿಮಾನಿಗಳ ಆಶಯ.

 
ಚೇತೇಶ್ವರ ಪೂಜಾರ ಇಂದೂ ಮತ್ತೊಂದು ಜಿಗುಟಾಟವಾಡುತ್ತಿದ್ದಾರೆ. ಸದ್ಯಕ್ಕೆ ಭಾರತಕ್ಕೆ ಬೇಕಾಗಿರುವುದೂ ಅದೇ. ಮೊನ್ನೆಯಷ್ಟೇ ದಾಖಲೆಯ ಅವಧಿ ಬ್ಯಾಟಿಂಗ್ ಮಾಡಿದ್ದ ಪೂಜಾರ ಇಂದು ಈಗಾಗಲೇ 57 ಎಸೆತ ಎದುರಿಸಿದ್ದು, 22 ರನ್ ಗಳಿಸಿದ್ದಾರೆ. ಇವರಿಬ್ಬರು ಎರಡನೇ ವಿಕೆಟ್ ಗೆ 43ರನ್ ಗಳ ಜತೆಯಾಟವಾಡಿದ್ದಾರೆ.

 
ಭಾರತ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 236 ರನ್ ಗಳಿಸಬೇಕಿದೆ. ಇಂದು ಬಿದ್ದ ಏಕಮಾತ್ರ ವಿಕೆಟ್ ಮುರಳಿ ವಿಜಯ್ ರದ್ದು. ಅದು ಹೇಝಲ್ ವುಡ್ ಪಾಲಾಯಿತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ