ಕನ್ ಕಷನ್ ಆಯ್ತು, ಇದೀಗ ಟೀಂ ಇಂಡಿಯಾದಿಂದ ಡಿಆರ್ ಎಸ್ ವಿವಾದ

ಬುಧವಾರ, 9 ಡಿಸೆಂಬರ್ 2020 (09:00 IST)
ಸಿಡ್ನಿ: ಮೊದಲ ಟಿ20 ಪಂದ್ಯದಲ್ಲಿ ರವೀಂದ್ರ ಜಡೇಜಾ ತಲೆಗೆ ಚೆಂಡು ತಗುಲಿದ ಬಳಿಕ ಯಜುವೇಂದ್ರ ಚಾಹಲ್ ರನ್ನು ಬದಲಿ ಆಟಗಾರನಾಗಿ ಬಳಸಿದ್ದು, ಟೀಂ ಇಂಡಿಯಾ ಪಾಲಿಗೆ ವಿವಾದವಾಯ್ತು.

 

ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದೆ. ಆಸ್ಟ್ರೇಲಿಯಾ ಇನಿಂಗ್ಸ್ 11 ನೇ ಓವರ್ ನಲ್ಲಿ ಮ್ಯಾಥ್ಯೂ ವೇಡ್ ಗೆ ಎಸೆದ ಬಾಲ್ ಪ್ಯಾಡ್ ಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ಸಂದರ್ಭದಲ್ಲಿ ರಾಹುಲ್ ಆಗಲೀ ಬೌಲರ್ ನಟರಾಜನ್ ಆಗಲೀ ಔಟ್ ಗೆ ಮನವಿ ಸಲ್ಲಿಸಲಿಲ್ಲ. ಆದರೆ ಕೊಂಚ ದೂರದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಕೊಹ್ಲಿ ಮೈದಾನದ ಸ್ಕ್ರೀನ್ ನಲ್ಲಿ ರಿಪ್ಲೇ ನೋಡಿ ರಿವ್ಯೂ ಬಳಸಿದರು ಎಂದು ಮ್ಯಾಥ್ಯೂ ವೇಡ್ ಸಹ ಆಟಗಾರನ ಬಳಿ ಹೇಳಿದ್ದು ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದೆ. ಕೊಹ್ಲಿ ರಿವ್ಯೂ ಬಳಸಿದಾಗ ವೇಡ್ ಔಟಾಗಿದ್ದರೂ ಕೊಹ್ಲಿ ಸರಿಯಾದ ಸಮಯಕ್ಕೆ ಡಿಆರ್ ಎಸ್ ತೆಗೆದುಕೊಳ್ಳಲಿಲ್ಲವೆಂದು ಅಂಪಾಯರ್ ಔಟ್ ನೀಡಲು ನಿರಾಕರಿಸಿದರು. ಇದರ ಬಗ್ಗೆ ಕೊಹ್ಲಿ ಅಂಪಾಯರ್ ಜತೆ ವಾಗ್ವಾದ ನಡೆಸಿದರು. ಟೀಂ ಇಂಡಿಯಾ ಈ ವಿಚಾರವಾಗಿ ಮತ್ತೆ ವಿವಾದಕ್ಕೊಳಗಾಗಿದ್ದಂತೂ ನಿಜ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ