ಭಾರತ-ಆಸ್ಟ್ರೇಲಿಯಾ ಟೆಸ್ಟ್: ಮುಳುಗುತ್ತಿದ್ದ ಟೀಂ ಇಂಡಿಯಾಗೆ ಕೊಹ್ಲಿಯೇ ಆಧಾರ
ಗುರುವಾರ, 17 ಡಿಸೆಂಬರ್ 2020 (17:10 IST)
ಅಡಿಲೇಡ್: ಮೊದಲ ಓವರ್ ನಲ್ಲೇ ವಿಕೆಟ್ ಬಿದ್ದ ಮೇಲೆ ತಡಬಡಾಯಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಗೆ ಬಲ ತುಂಬಿದ್ದು ವಿರಾಟ್ ಕೊಹ್ಲಿ. ಇವರಿಗೆ ಸಾಥ್ ನೀಡಿದ್ದು ಉಪನಾಯಕ ಅಜಿಂಕ್ಯಾ ರೆಹಾನೆ. ಇವರಿಬ್ಬರ ಆಟದಿಂದಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ.
ದಿನದಂತ್ಯಕ್ಕೆ ರವಿಚಂದ್ರನ್ ಅಶ್ವಿನ್ 15 ಮತ್ತು ವೃದ್ಧಿಮಾನ್ ಸಹಾ 9 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಬಳಿಕ ಮಯಾಂಕ್-ಚೇತೇಶ್ವರ ಪೂಜಾರ ಕೆಲ ಹೊತ್ತು ಆಡಿದರೂ ಮಯಾಂಕ್ 17 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಚೇತೇಶ್ವರ ಪೂಜಾರ ಅಪ್ಪಟ ಟೆಸ್ಟ್ ಶೈಲಿಯ ಇನಿಂಗ್ಸ್ ಆಡಿ 160 ಎಸೆತಗಳಿಂದ 43 ರನ್ ಗಳಿಸಿ ಔಟಾದರು. ಇದರ ನಡುವೆ ನಾಯಕನ ಆಟವಾಡಿದ ಕೊಹ್ಲಿ 180 ಎಸೆತಗಳಿಂದ 74 ರನ್ ಗಳಿಸಿ ತಂಡದ ಮೊತ್ತ ಚಾಲೂ ಆಗಿರುವಂತೆ ನೋಡಿಕೊಂಡರು. ಇವರಿಗೆ ಸಾಥ್ ನೀಡಿದ ಉಪ ನಾಯಕ ರೆಹಾನೆ 42 ರನ್ ಗಳಿಸಿ ಔಟಾದರು. ಕೊಹ್ಲಿ ಅರ್ಧಶತಕ ಗಳಿಸಿದ್ದು, ಬಿಟ್ಟರೆ ಉಳಿದವರಿಂದ ದೊಡ್ಡ ಮೊತ್ತದ ಇನಿಂಗ್ಸ್ ಬರಲೇ ಇಲ್ಲ.