ಟಿ20 ದಿಗ್ವಿಜಯದ ಬಳಿಕ ಇಂಗ್ಲೆಂಡ್ ವಿರುದ್ಧ ಏಕದಿನ ಬೇಟೆಗೆ ಹೊರಟ ರೋಹಿತ್ ಶರ್ಮಾ ಪಡೆ
ಮಂಗಳವಾರ, 12 ಜುಲೈ 2022 (08:30 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ ಬಳಿಕ ಇಂದಿನಿಂದ ಏಕದಿನ ಸರಣಿ ಆರಂಭವಾಗುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದೆ.
ಈಗಾಗಲೇ ಟಿ20 ಸರಣಿಯಲ್ಲಿ 2-1 ಅಂತರದಿಂದ ಗೆಲುವು ಕಂಡಿರುವ ಭಾರತ ಅದೇ ಉತ್ಸಾಹದಲ್ಲಿ ಏಕದಿನ ಸರಣಿ ಆಡಲಿದೆ. ಸೀಮಿತ ಓವರ್ ಗಳಲ್ಲಿ ಟೀಂ ಇಂಡಿಯಾ ಪ್ರಬಲ ತಂಡವೇ. ಯುವ ಕ್ರಿಕೆಟಿಗರು ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಬಹಳ ದಿನಗಳ ನಂತರ ರೋಹಿತ್ ಶರ್ಮಾ-ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ನೋಡಬಹುದು. ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಸ್ಥಾನ ಪಡೆಯಲಿದ್ದಾರೆ. ಆಲ್ ರೌಂಡರ್ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಅವಕಾಶ ಪಡೆಯಬಹುದು. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ ಕೃಷ್ಣಗೆ ಅವಕಾಶ ಸಿಗಬಹುದು. ಈ ಪಂದ್ಯ ಸಂಜೆ 5.30 ಕ್ಕೆ ಆರಂಭವಾಗಲಿದೆ.