ಕೋಚ್ ರವಿಶಾಸ್ತ್ರಿಯನ್ನು ಕಿತ್ತೊಗೆಯಲು ಒತ್ತಾಯಿಸಿದ ಟೀಂ ಇಂಡಿಯಾ ಕ್ರಿಕೆಟಿಗ!
ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಮಾಜಿ ನಾಯಕ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ರವಿಶಾಸ್ತ್ರಿ ಕಾರ್ಯ ವೈಖರಿಯನ್ನು ಪ್ರಶ್ನಿಸಿದ್ದರು. ಇದೀಗ ಹಿರಿಯ ಕ್ರಿಕೆಟಿಗ ಚೇತನ್ ಚೌಹಾನ್ ಕೂಡಾ ಅದೇ ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ರವಿಶಾಸ್ತ್ರಿಯನ್ನು ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ರವಿಶಾಸ್ತ್ರಿ ಕಾಮೆಂಟರಿ ಹೇಳುವುದರಲ್ಲಿ ಎಕ್ಸ್ ಪರ್ಟ್. ಅವರನ್ನು ಕೋಚ್ ಹುದ್ದೆಯಿಂದ ವಜಾಗೊಳಿಸಿ ಅವರ ಇಷ್ಟದ ಕಾಮೆಂಟರಿ ಹೇಳಲು ಬಿಡಿ ಎಂದು ಚೌಹಾನ್ ಆಗ್ರಹಿಸಿದ್ದಾರೆ.