ಟೀಂ ಇಂಡಿಯಾ ಮುನ್ನಡೆಗೆ ಚೇತೇಶ್ವರ ಪೂಜಾರ, ರಿಷಬ್ ಪಂತ್ ಆಧಾರ

ಸೋಮವಾರ, 4 ಜುಲೈ 2022 (08:15 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ.

ಇದರೊಂದಿಗೆ ಟೀಂ ಇಂಡಿಯಾ 257 ರನ್ ಗಳ ಮುನ್ನಡೆ ಸಾಧಿಸಿದೆ. ಇದೀಗ ಕ್ರೀಸ್ ನಲ್ಲಿ 50 ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು 30 ರನ್ ಗಳಿಸಿರುವ ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಆರಂಭಿಕ ಶುಬ್ನಂ ಗಿಲ್, ವಿರಾಟ್ ಕೊಹ್ಲಿ, ಹನುಮ ವಿಹಾರಿಯದ್ದು ಮತ್ತೆ ಫ್ಲಾಪ್ ಶೋ. ಗಿಲ್ 4, ಹನುಮ ವಿಹಾರಿ 11, ವಿರಾಟ್ ಕೊಹ್ಲಿ ಕೇವಲ 20 ರನ್ ಗಳಿಸಿ ಔಟಾಗಿದ್ದಾರೆ. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಮತ್ತು ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಕಬಳಿಸಿದ್ದಾರೆ. ಇಂದು ಭಾರತ ವೇಗವಾಗಿ ರನ್ ಗಳಿಸಿ ಇಂಗ್ಲೆಂಡ್ ನ್ನು ದ್ವಿತೀಯ ಇನಿಂಗ್ಸ್ ಆಡುವಂತೆ ಮಾಡದೇ ಹೋದರೆ ಗೆಲುವು ಕಷ್ಟವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ