ವೆಸ್ಟ್ ಇಂಡೀಸ್ ಗೆ ಕಾಲಿಟ್ಟ ಗಳಿಗೆಯಲ್ಲೇ ಟೀಂ ಇಂಡಿಯಾಗೆ ನಿರಾಸೆ

ಶನಿವಾರ, 24 ಜೂನ್ 2017 (09:02 IST)
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡಲು ಕೆರೆಬಿಯನ್ ನಾಡಿಗೆ ಬಂದಿಳಿದ ಗಳಿಗೆಯೇ ಟೀಂ ಇಂಡಿಯಾಕ್ಕೆ ನಿರಾಸೆಯಾಗಿದೆ.

 
ಕೋಚ್ ವಿವಾದದಿಂದ ಹೊರ ಬಂದು ಮೊದಲ ಪಂದ್ಯವನ್ನೇ ಗೆದ್ದು ಬೀಗಬೇಕೆಂದು ಲೆಕ್ಕಾಚಾರ ಹಾಕಿದ್ದ ಟೀಂ ಇಂಡಿಯಾಗೆ ವರುಣ ಅಡ್ಡಿ ಮಾಡಿದ. ಇದರೊಂದಿಗೆ ಮೊದಲ ಪಂದ್ಯವೇ ಮಳೆಯಿಂದಾಗಿ ರದ್ದಾಗಿದೆ.

ಟಾಸ್ ಗೆದ್ದು ಭಾರತಕ್ಕೆ ಮೊದಲು ಬ್ಯಾಟ್ ಮಾಡಲು ವಿಂಡೀಸ್ ಆಹ್ವಾನಿಸಿತು. ಅದರಂತೆ ಚೆನ್ನಾಗಿಯೇ ಬ್ಯಾಟ್ ಬೀಸುತ್ತಿದ್ದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಮೊದಲ ವಿಕೆಟ್ ಗೆ ಉತ್ತಮ ಜತೆಯಾಟವನ್ನೇ ನಿಭಾಯಿಸಿದರು.

ಶಿಖರ್ ಧವನ್ ಮತ್ತು ಅಜಿಂಕ್ಯಾ ರೆಹಾನೆ ಭರ್ಜರಿ ಅರ್ಧ ಶತಕ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 39.2 ಓವರ್ ಗಳಲ್ಲಿ 199 ಕ್ಕೆ 3 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿದು ಪಂದ್ಯ ರದ್ದಾಯಿತು.

ಈ ನಡುವೆ ಯುವರಾಜ್ ಸಿಂಗ್ ವೆಸ್ಟ್ ಇಂಡೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಮಾಡಿದರು. ಅವರೀಗ 500 ರನ್ ಪೂರೈಸಿ ಭಾರತೀಯರ ಪೈಕಿ ಮುಂಚೂಣಿಯಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌiನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ