ಟೆಸ್ಟ್ ಸರಣಿ ಗೆದ್ದು ಯುಗಾದಿ ಗಿಫ್ಟ್ ಕೊಟ್ಟ ಟೀಂ ಇಂಡಿಯಾ

ಮಂಗಳವಾರ, 28 ಮಾರ್ಚ್ 2017 (10:55 IST)
ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇವು-ಬೆಲ್ಲ ಎರಡನ್ನೂ ನೀಡಿದ್ದರು. ಆದರೆ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ನಾಯಕರಾದ ಅಜಿಂಕ್ಯಾ ರೆಹಾನೆ ಬೆಲ್ಲದ ಹಬ್ಬದೂಟ ನೀಡಿದರು.

 

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 8  ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡು ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಂಡಿದೆ. ಅಲ್ಲದೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ರಿಂದ ತನ್ನದಾಗಿಸಿಕೊಂಡಿದೆ.

 
ಗೆಲುವಿಗೆ 106 ರನ್ ಗಳ ಸಣ್ಣ ಮೊತ್ತ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಿತು. ಆದರೆ ಮಧ್ಯೆ ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ವಿಕೆಟ್ ಗಳನ್ನು ಕಡಿಮೆ ಅಂತರದಲ್ಲಿ ಕಳೆದುಕೊಂಡಿತು. ಆದರೆ ಅರ್ಧಶತಕ ವೀರ ಕೆಎಲ್ ರಾಹುಲ್ ಮತ್ತೊಂದು ಫಿಫ್ಟಿ ಹೊಡೆದು, ನಾಯಕ ರೆಹಾನೆ ಜತೆ ಸುರಕ್ಷಿತವಾಗಿ ತಂಡವನ್ನು ದಡ ಸೇರಿಸಿದರು.  2 ವಿಕೆಟ್ ಕಳೆದುಕೊಂಡು 106 ರನ್ ಮಾಡಿತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ