ವಿರಾಟ್ ಕೊಹ್ಲಿ ಬಿರುಗಾಳಿಗೆ ಬೆಚ್ಚಿಬಿತ್ತು ಶ್ರೀಲಂಕಾ

ಶನಿವಾರ, 29 ಜುಲೈ 2017 (10:34 IST)
ಗಾಲೆ: ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೂರನೇ ದಿನ ನಿನ್ನೆ 498 ರನ್ ಗಳ ಮುನ್ನಡೆಯೊಂದಿಗೆ ದಿನದಾಟ ಮುಗಿಸಿದ್ದ ಟೀಂ ಇಂಡಿಯಾ ಕೇವಲ 6.3 ಓವರ್ ಗಳಲ್ಲಿ ಮತ್ತೆ 51 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.


ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರೆಹಾನೆ ಟಿ-20 ಶೈಲಿಯಲ್ಲಿ ಬ್ಯಾಟ್ ಬೀಸಿದರು. ಇದರೊಂದಿಗೆ ಕೊಹ್ಲಿ ಶತಕ (103) ದಾಖಲಿಸಿ ಅಜೇಯವಾಗುಳಿದರು. ಅವರ ಜತೆಗೆ ರೆಹಾನೆ 23 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

ಇದರೊಂದಿಗೆ ಭಾರತ ಶ್ರೀಲಂಕಾಕ್ಕೆ ಗೆಲ್ಲಲು 550 ರನ್ ಗಳ ಬೃಹತ್ ಮೊತ್ತ ನೀಡಿದೆ. ಇನ್ನೂ ಎರಡು ದಿನ ಪಂದ್ಯ ಬಾಕಿಯಿದ್ದು, ಶ್ರೀಲಂಕಾ ಬ್ಯಾಟ್ಸ್ ಮನ್ ಗಳಿಗೆ ಇಷ್ಟು ದೊಡ್ಡ ಮೊತ್ತ ಬೆನ್ನತ್ತುವುದು ಕಷ್ಟವಾಗಬಹುದು. ಭಾರತದ ಬೌಲರ್ ಗಳು ಕರಾರುವಾಕ್ ದಾಳಿ ನಡೆಸಿದರೆ ಇಂದೇ ಗೆಲುವು ಅಸಾಧ್ಯವೇನಲ್ಲ.

ಇದನ್ನೂ ಓದಿ..  ಆಪರೇಷನ್ ಕಮಲ ಭಯ: ಕರ್ನಾಟಕಕ್ಕೆ ಬಂದ ಗುಜರಾತ್ ಕೈ ಶಾಸಕರು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ