ಟಿ20 ವಿಶ್ವಕಪ್: ಅಫ್ಘನ್ ಎದುರು ಟೀಂ ಇಂಡಿಯಾ ಅಬ್ಬರ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾಕ್ಕೆ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಸ್ಪೋಟಕ ಆರಂಭ ನೀಡಿದರು. ಪರಿಣಾಮ 5 ಓವರ್ ಗಳಲ್ಲಿ ಭಾರತದ ಮೊತ್ತ 50 ದಾಟಿತ್ತು. ಕೆಎಲ್ ರಾಹುಲ್ 69 ರನ್, ರೋಹಿತ್ 74 ರನ್ ಗಳಿಸಿ ಔಟಾದರು.
ಅಂತಿಮ ಹಂತದಲ್ಲಿ ರಿಷಬ್ ಪಂತ್ 13 ಎಸೆತಗಳಲ್ಲಿ 27 ರನ್ ಮತ್ತು ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 35 ರನ್ ಸೇರಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು.