ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಕ್ಕಿರುವುದು ಮೂರು ಚಿಂತೆ

ಶನಿವಾರ, 16 ಮಾರ್ಚ್ 2019 (09:09 IST)
ಮುಂಬೈ: ಐಪಿಎಲ್ ಬಿಟ್ಟರೆ ಕ್ರಿಕೆಟಿಗರಿಗೆ ಇನ್ನು ಉಳಿದಿರುವುದು ವಿಶ್ವಕಪ್ ಕೂಟ ಒಂದೇ. ಮಹತ್ವದ ಕೂಟಕ್ಕೆ ತಯಾರಾಗುತ್ತಿರುವ ಟೀಂ ಇಂಡಿಯಾಗೆ ಉಳಿದಿರುವುದು ಮೂರು ಚಿಂತೆ.


ಆರಂಭಿಕರ ಅಸ್ಥಿರತೆ
ಮೊದಲನೆಯದಾಗಿ ಟೀಂ ಇಂಡಿಯಾಗಿರುವ ದೊಡ್ಡ ತಲೆನೋವು ಆರಂಭಿಕರದ್ದು. ಆರಂಭಿಕರು ಒಂದು ಪಂದ್ಯದಲ್ಲಿ ಆಡಿದರೆ ಇನ್ನೊಂದು ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದಾಗಿ ಭಾರತಕ್ಕೆ ಸ್ಥಿರ ಆರಂಭ ಸಿಗುತ್ತಿಲ್ಲ. ರೋಹಿತ್ ಶರ್ಮಾ, ಶಿಖರ್ ಧವನ್ ಫಾರ್ಮ್ ಅಸ್ಥಿರತೆಯೇ ಭಾರತಕ್ಕೆ ದೊಡ್ಡ ಚಿಂತೆಯಾಗಿದೆ.

ನಂ.4 ಚಿಂತೆ
ಬ್ಯಾಟಿಂಗ್ ಬಲಗೊಳ್ಳಬೇಕೆಂದರೆ ಮಧ್ಯಮ ಕ್ರಮಾಂಕ ಬಲಗೊಳ್ಳಬೇಕು. ಆದರೆ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕಕ್ಕೆ ಸ್ಥಿರವಾದ, ನಿಂತು ಆಡುವ ಆಟಗಾರ ಸಿಗುತ್ತಿಲ್ಲ. ಇದುವರೆಗಿನ ಟೂರ್ನಿಯಲ್ಲಿ ಹಲವು ಆಟಗಾರರನ್ನು ಈ ಕ್ರಮಾಂಕದಲ್ಲಿ ಆಡಿಸಿ ಪ್ರಯೋಗ ಮಾಡಿಸಲಾಯಿತಾದರೂ ಅದರಿಂದ ಪ್ರಯೋಜನವಾಗಿಲ್ಲ. ಈ ಬಗ್ಗೆ ಸ್ವತಃ ನಾಯಕ ಕೊಹ್ಲಿ ಕೂಡಾ ಆಸ್ಟ್ರೇಲಿಯಾ ಸರಣಿ ಬಳಿಕ ಕಳವಳದಿಂದ ಮಾತನಾಡಿದ್ದಾರೆ. ಈ ಒಂದು ಸ್ಥಾನ ಭರ್ತಿ ಮಾಡುವ ಬಗ್ಗೆಯೇ ಚರ್ಚೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.

ಆಲ್ ರೌಂಡರ್
ಆಲ್ ರೌಂಡರ್ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಿಜಯ್ ಶಂಕರ್ ನಡುವೆ ಪೈಪೋಟಿಯಿದೆ. ಆದರೆ ಅಂತಿಮವಾಗಿ ಈ ಸ್ಥಾನ ಯಾರ ಪಾಲಾಗಬೇಕು ಎನ್ನುವುದೇ ಟೀಂ ಇಂಡಿಯಾ ತಲೆನೋವು. ಪಾಂಡ್ಯ ಆಗಾಗ ಗಾಯಕ್ಕೊಳಗಾಗುತ್ತಿದ್ದರೆ, ಇತ್ತ ವಿಜಯ್  ಶಂಕರ್ ಇನ್ನೂ ಪಕ್ವವಾಗಿಲ್ಲ. ರವೀಂದ್ರ ಜಡೇಜಾ ಇಂಗ್ಲೆಂಡ್ ಪಿಚ್ ಗಳಲ್ಲಿ ಉಪಯೋಗಕ್ಕೆ ಬರುತ್ತಾರೋ ಎಂಬುದು ಸ್ಪಷ್ಟವಿಲ್ಲ. ಹೀಗಾಗಿ ಆಲ್ ರೌಂಡರ್ ಸ್ಥಾನ ತಲೆನೋವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ