ವಿರಾಟ್ ಕೊಹ್ಲಿ ಶತಕ, ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ

ಶನಿವಾರ, 23 ನವೆಂಬರ್ 2019 (15:42 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಹೊನಲು ಬೆಳಕು ಟೆಸ್ಟ್ ಪಂದ್ಯದಲ್ಲಿ ದ್ವಿತೀಯ ದಿನದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ.


ಬಾಂಗ್ಲಾ ಮೊದಲ ಇನಿಂಗ್ಸ್ ನಲ್ಲಿ 106 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 183 ರನ್ ಗಳ ಮುನ್ನಡೆ ಸಾಧಿಸಿದೆ. ವಿಶೇಷವೆಂದರೆ ನಾಯಕ ವಿರಾಟ್ ಕೊಹ್ಲಿ 130 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರವೀಂದ್ರ ಜಡೇಜಾ 12 ರನ್ ಗಳಿಸಿ ಸಾಥ್ ನೀಡುತ್ತಿದ್ದಾರೆ. ಅಜಿಂಕ್ಯಾ ರೆಹಾನೆ ಉತ್ತಮ ಲಯದಲ್ಲಿದ್ದರೂ 51 ರನ್ ಗಳಿಗೆ ಔಟಾಗಿ ನಿರಾಸೆ ಅನುಭವಿಸಿದರು.

ಕೊಹ್ಲಿ ಪಾಲಿಗೆ ಇದು ವಿಶೇಷ ಇನಿಂಗ್ಸ್ ಆಗಿತ್ತು. ಅವರ ಕೆಲವೊಂದು ಮನಮೋಹಕ ಹೊಡೆತಗಳಿಗೆ ಎದುರಾಳಿ ಬೌಲರ್ ಗಳೇ ಚಪ್ಪಾಳೆ ತಟ್ಟಿದ್ದೂ ಕಂಡುಬಂತು. ಇದೇ ರೀತಿ ಮುಂದುವರಿದರೆ ಅವರಿಂದ ದ್ವಿಶತಕ ದಾಖಲಾದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ