ನವದೆಹಲಿ: ಕೊನೆಯವರೆಗೆ ಕುತೂಹಲ ಕೆರಳಿಸಿದ್ದ ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮವಾಗಿ ಕೇವಲ 6 ರನ್ನುಗಳಿಂದ ಸೋಲನುಭವಿಸಿದೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿತ್ತು. ನ್ಯೂಜಿಲೆಂಡ್ ಪರ ನಾಯಕ ಕೇನ್ಸ್ ವಿಲಿಯಮ್ಸ್ ಶತಕ (118 ರನ್) ಗಳಿಸಿದರು. ಭಾರತದ ಪರ ಅಮಿತ್ ಮಿಶ್ರಾ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಕಬಳಸಿದರು.
ನ್ಯೂಜಿಲೆಂಡ್ ನೀಡಿದ ಮೊತ್ತವನ್ನು ಬೆನ್ನಿತ್ತದ ಭಾರತದ ಬ್ಯಾಟ್ಸ್ ಮನ್ ಗಳು ಯಾರೂ ಹೆಚ್ಚು ಪ್ರತಿರೋಧ ತೋರದೇ ವಿಕೆಟ್ ಒಪ್ಪಿಸಿದರು. ಕೇದಾರ್ ಜಾದವ್ 41 ರನ್ ಹಾಗೂ ನಾಯಕ ಧೋನಿ 39 ರನ್ ಗಳಿಸಿ ಕೊಂಚ ಭರವಸೆ ಮೂಡಿಸಿದರೂ ಹೆಚ್ಚು ಅವರ ಆಟ ನಡೆಯಲಿಲ್ಲ. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಚುರುಕಿನ 36 ರನ್ ಗಳಿಸಿದರೂ ಪ್ರಯೋಜನವಾಗಲಿಲ್ಲ. ಭಾರತ 49.3 ಓವರ್ ಗಳಲ್ಲಿ 236 ರನ್ನುಗಳಿಗೆ ಆಲೌಟ್ ಆಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ