ಹೇಳಿದಂತೇ ಮಾಡಿಬಿಟ್ಟರು ರೋಹಿತ್ ಶರ್ಮಾ!

ಬುಧವಾರ, 7 ಮಾರ್ಚ್ 2018 (08:57 IST)
ಕೊಲೊಂಬೋ: ತ್ರಿಕೋನ ಟಿ 20 ಸರಣಿ ಆರಂಭಕ್ಕೆ ಮೊದಲು ಈ ಸರಣಿ ಗೆಲ್ಲುವ ಫೇವರಿಟ್ ತಂಡ ನಾವಲ್ಲ ಎಂದು ಹಂಗಾಮಿ ನಾಯಕ ರೋಹಿತ್ ಶರ್ಮಾ ಘೋಷಿಸಿದ್ದರು. ಇದೀಗ ಅದರಂತೆಯೇ ನಡೆದುಕೊಂಡಿದ್ದಾರೆ.

ಮೊದಲ ಪಂದ್ಯದಲ್ಲೇ ಶ್ರೀಲಂಕಾ ವಿರುದ್ಧ ಸೋತು ಚುಟುಕು ಕ್ರಿಕೆಟ್ ನ ಫಲಿತಾಂಶ ಹೇಗೆ ಬೇಕಾದರೂ ವಾಲಬಹುದು ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 20 ಓವರ್ ಗಳಲ್ಲಿ 174 ರನ್ ಗಳಿಸಿತು. ಶಿಖರ್ ಧವನ್ ಬಿರುಗಾಳಿಯಂತೆ 49 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಗಳ ಸಹಿತ 90 ರನ್ ಚಚ್ಚದೇ ಇದ್ದಿದ್ದರೆ ಭಾರತದ ಸ್ಕೋರ್ ಇನ್ನೂ ಕಳಪೆಯಾಗುತ್ತಿತ್ತು.

ಮನೀಶ್ ಪಾಂಡೆ 35 ಎಸೆತಗಳಲ್ಲಿ 37 ರನ್ ಗಳಿಸಿದರು. ರಿಷಬ್ ಪಂತ್ 23 ರನ್ ಗಳಿಸಿದರು. ಉಳಿದ ಹೊಸಬರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಯಥಾವತ್ ಶೂನ್ಯಕ್ಕೆ ನಿರ್ಗಮಿಸಿದರು.

ನಂತರ ಬ್ಯಾಟಿಂಗ್ ಮಾಡಿದ ಲಂಕಾ ಕುಸಲಾ ಪೆರೆರಾ ಆಸರೆಯಾದರು. ಅವರೊಬ್ಬರೇ ಏಕಾಂಗಿಯಾಗಿ ಸಿಡಿದು 66 ರನ್ ಗಳಿಸುವ ಮೂಲಕ ಲಂಕೆಗೆ ಜಯ ತಂದಿತ್ತರು. ಭಾರತದ ಪರ ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಕಿತ್ತರು. ಜಯದೇವ್ ಉನಾದ್ಕಟ್ ಗೆ 1 ವಿಕೆಟ್ ದಕ್ಕಿತು. ಇದರೊಂದಿಗೆ ಲಂಕಾ 5 ವಿಕೆಟ್ ಗಳ ಗೆಲುವ ಕಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ