ನಿಧಾಸ್ ಟ್ರೋಫಿ ಫೈನಲ್ ನ ಆಟ ನೆನಪಿಸಿದ ದಿನೇಶ್ ಕಾರ್ತಿಕ್: ಆದರೂ ಗೆಲ್ಲದ ಟೀಂ ಇಂಡಿಯಾ

ಬುಧವಾರ, 21 ನವೆಂಬರ್ 2018 (17:38 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ರೋಚಕವಾಗಿ ಆಡಿದರೂ 4 ರನ್ ಗಳಿಂದ ವೀರೋಚಿತವಾಗಿ ಸೋತಿದೆ.


ಮಳೆಯಿಂದಾಗಿ 17 ಓವರ್ ಗೆ ಸೀಮಿತಗೊಂಡಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಆದರೆ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 17 ಓವರ್ ಗಳಲ್ಲಿ 174 ರನ್ ಗುರಿ ಸಿಕ್ಕಿತು.

ಈ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ 7 17 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರೂ ಶಿಖರ್ ಧವನ್ ಗೆಲುವಿನ ಆಸೆ ಚಿಗುರಿಸಿದ್ದರು. ಶಿಖರ್ 42 ಬಾಲ್ ಗಳಲ್ಲಿ 76 ರನ್ ಗಳಿಸಿದಾಗ ಔಟಾದರು. ಅದಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿತ್ತು. ಒಂದು ವೇಳೆ ಕೊಹ್ಲಿ ಧವನ್ ಗೆ ಸಾಥ್ ಕೊಡುತ್ತಿದ್ದರೆ ತಂಡದ ಸ್ಥಿತಿ ಸುಧಾರಿಸುತ್ತಿತ್ತು. ಆದರೆ ಉಳಿದವರಿಂದ ತಕ್ಕ ಸಾಥ್ ಸಿಗದೇ ಧವನ್ ಸೋತರು.

ಈ ಸಂದರ್ಭದಲ್ಲಿ ಟೀಂ ಇಂಡಿಯಾಕ್ಕೆ ಸೋಲೇ ಗತಿ ಎನ್ನುವಂತಾಗಿತ್ತು. ಆದರೆ ಅಂದು ನಿಧಾಸ್ ಟ್ರೋಫಿ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟಂತೆ ದಿನೇಶ್ ಕಾರ್ತಿಕ್ ಮತ್ತೊಮ್ಮೆ ಅಂತಹದ್ದೇ ಇನಿಂಗ್ಸ್ ಆಡಲು ಮುಂದಾದರು. ಆದರೆ ದುರದೃಷ್ಟವಶಾತ್ ಕೊನೆಯ ಓವರ್ ನಲ್ಲಿ 13 ಬಾಲ್ ಗಳಲ್ಲಿ 30 ರನ್ ಗಳಿಸಿದ್ದಾಗ ಸಿಕ್ಸರ್ ಭಾರಿಸುವ ಒತ್ತಡದಲ್ಲಿ ಔಟಾದರು.

ಇದರೊಂದಿಗೆ ಟೀಂ ಇಂಡಿಯಾ ಸೋಲು ಖಾತ್ರಿಯಾಯಿತು. ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಕಾರ್ತಿಕ್ ಜತೆ ಸ್ವಲ್ಪ ಪ್ರತಿರೋಧ ತೋರಿದರೂ ಒತ್ತಡದ ಸಂದರ್ಭದಲ್ಲಿ 15 ಬಾಲ್ ಗಳಲ್ಲಿ 20 ರನ್ ಗೆ ವಿಕೆಟ್ ಕೈ ಚೆಲ್ಲಿದದರು.  ರೋಚಕವಾಗಿ ಗೆಲ್ಲಬೇಕಿದ್ದ ಪಂದ್ಯವನನ್ನು ಸೋತು ಭಾರತ ನಿರಾಶೆಗೊಳಗಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ