ಭಾರತ-ಆಸೀಸ್ ಟೆಸ್ಟ್: ಎರಡನೇ ದಿನದಂತ್ಯಕ್ಕೆ ಟೀಂ ಇಂಡಿಯಾ ಹಿಡಿತದಲ್ಲಿ ಟೆಸ್ಟ್

ಶುಕ್ರವಾರ, 18 ಡಿಸೆಂಬರ್ 2020 (17:06 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 9 ರನ್ ಗಳೊಂದಿಗೆ ದಿನದಾಟ ಮುಗಿಸಿದೆ.


ಆರಂಭಿಕ ಪೃಥ್ವಿ ಶಾ 4 ರನ್ ಗಳಿಸಿ ಪ್ಯಾಟ್ ಕ್ಯುಮಿನ್ಸ್ ಬಾಲ್ ನಲ್ಲಿ ಬೌಲ್ಡ್ ಆಗಿದ್ದಾರೆ.  ಉಳಿದಂತೆ ಮಯಾಂಕ್ ಅಗರ್ವಾಲ್ 5 ರನ್ ಮತ್ತು ನೈಟ್ ವಾಚ್ ಮನ್ ಆಗಿ ಜಸ್ಪ್ರೀತ್ ಬುಮ್ರಾ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ನಾಳೆಯ ದಿನದಾಟ ಮಹತ್ವದ್ದಾಗಿದೆ. ನಾಳೆಯ ದಿನದಾಟದಲ್ಲಿ ಟೀಂ ಇಂಡಿಯಾಗೆ ಒಂದೆರಡು ಉತ್ತಮ ಜತೆಯಾಟವಾಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ